ವಿವಾಹದ ದಿನ ಮದುಮಗಳು ಯಾವ ರೀತಿ ತಯಾರಾಗುತ್ತಾರೆ ಎಂಬುದು ನಿಮಗೆಲ್ಲರಿಗೂ ಗೊತ್ತೇ ಇದೆ. ವಧು ರೆಡಿ ಆಗೋಕೆ ಸುಮಾರು 2 ರಿಂದ 3 ಗಂಟೆ ಕಾಲ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಇಲ್ಲೊಬ್ಬ ವರ ವಧುಗಿಂತ ಮುಂಚೆ ಮೇಕಪ್ ಹಚ್ಚಿಕೊಳ್ಳಲು ತಯಾರಾಗಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗಳ ಕೈಗೆ ಮೊಬೈಲ್ ಕೊಟ್ಟ ತಾಯಿಗೆ ಬಳಿಕ ಕಾದಿತ್ತು ʼಬಿಗ್ ಶಾಕ್ʼ
ವಿಡಿಯೋದಲ್ಲಿ ವರ, ವಧುವಿಗಿಂತ ಮುಂಚೆ ಕುಳಿತು ಮೇಕಪ್ ಮಾಡಿಸಿಕೊಳ್ಳುತ್ತಿರುವುದನ್ನು ನೋಡಬಹುದು. ವಧು ಆತನ ಬಳಿ ತನಗೆ ತಯಾರಾಗಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಹುಡುಗಿಯರು ಮೇಕ್ಅಪ್ ಮಾಡಲು ಸಾಧ್ಯವಿರುವಾಗ, ಹುಡುಗರು ಯಾಕೆ ಮೇಕ್ಅಪ್ ಮಾಡಬಾರದು ಎಂಬುದು ವರನ ಪ್ರಶ್ನೆಯಾಗಿದೆ. ನೀನು ಮಾತ್ರ ರೆಡಿ ಆಗು, ನಾನು ಮಾತ್ರ ಹೀಗೆ ಇರಬೇಕಾ ಎಂದು ವಧು ಪ್ರಶ್ನಿಸಿದ್ದಾಳೆ. ವರ ಮಾತ್ರ ಏನಾದ್ರೂ ಮಾಡಿಕೋ ಮೊದಲು ತಾನು ತಯಾರುಗುತ್ತೇನೆ ಎಂಬಂತೆ ಮೇಕಪ್ ಮಾಡಿಸಿಕೊಂಡಿದ್ದಾನೆ.
ಇಷ್ಟವಿಲ್ಲದ ಮದುವೆಗೆ ಹಠಹಿಡಿದ ಪುತ್ರಿಯ ಜೀವತೆಗೆದ ತಂದೆ
ಈ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ಗ್ಲಾಮ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು 2 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
https://youtu.be/wKjd0v-wa2Q