alex Certify ಕೂದಲಿಗೆ ಚಮತ್ಕಾರವನ್ನೇ ಮಾಡುತ್ತದೆ ದೇಸಿ ತುಪ್ಪದ ಮಸಾಜ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿಗೆ ಚಮತ್ಕಾರವನ್ನೇ ಮಾಡುತ್ತದೆ ದೇಸಿ ತುಪ್ಪದ ಮಸಾಜ್‌

ದೇಸೀ ತುಪ್ಪದ ಹತ್ತಾರು ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿದಿನ ಕನಿಷ್ಠ ಒಂದು ಚಮಚ ತುಪ್ಪ ತಿನ್ನುವುದು ಆರೋಗ್ಯಕ್ಕೆ ಬಹಳ ಸೂಕ್ತ. ಕೂದಲಿನ ಸಮಸ್ಯೆಗಳನ್ನೂ ಇದು ನಿವಾರಿಸಬಲ್ಲದು.

ತುಪ್ಪದಲ್ಲಿ ವಿಟಮಿನ್ ಎ, ಇ, ಜೊತೆಗೆ ಪ್ರೊಟೀನ್ ಮತ್ತು ಎಂಟಿಒಕ್ಸಿಡೆಂಟ್‌ಗಳಿರುತ್ತವೆ. ಇದು ಕೂದಲಿಗೆ ಪೋಷಣೆ ನೀಡುತ್ತವೆ.ತುಪ್ಪದಲ್ಲಿರುವ ವಿಟಮಿನ್ ಇ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ನೆತ್ತಿಯನ್ನು ಬಲಪಡಿಸುತ್ತದೆ.

ದೇಸಿ ತುಪ್ಪ ತಲೆಹೊಟ್ಟನ್ನು ಕೂಡ ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ನೆತ್ತಿಗೆ ತುಪ್ಪದಿಂದ ಮಸಾಜ್‌ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಡೆಡ್‌ ಸ್ಕಿನ್‌ ತೆಗೆದುಹಾಕಬಹುದು. ಇದರಿಂದ  ಕೂದಲಿನಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ತುಪ್ಪವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಎಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ದಟ್ಟನೆಯ ಕಪ್ಪು ಕೂದಲನ್ನು ಹೊಂದಲು ಬಯಸುವವರು ನಿಯಮಿತವಾಗಿ ತುಪ್ಪದ ಮಸಾಜ್‌ ಮಾಡಿಕೊಳ್ಳಬೇಕು. ನಿಯಮಿತವಾಗಿ ತುಪ್ಪವನ್ನು ಅನ್ವಯಿಸುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ. ಕೂದಲನ್ನು ಇದು ಮೃದುವಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...