ವೃದ್ಧೆಯೊಬ್ಬರು ಕಡ ಪ್ರಸಾದ ತಯಾರಿಸಿ ಗುರುದ್ವಾರಕ್ಕೆ ಅರ್ಪಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃದ್ಧೆಯು ಬಾಣಲೆಯಲ್ಲಿ ತುಪ್ಪ, ಹಿಟ್ಟು, ಸಕ್ಕರೆ ಮತ್ತು ನೀರನ್ನು ಸೇರಿಸಿ ಕಡ ಪ್ರಸಾದ ಮಾಡಿದ್ದಾರೆ. ನಂತರ ಅದನ್ನು ಗುರುದ್ವಾರಕ್ಕೆ ತೆಗೆದುಕೊಂಡು ಹೋಗಿ ಪವಿತ್ರ ಪುಸ್ತಕದ ಪಕ್ಕದಲ್ಲಿ ಇಟ್ಟಿದ್ದಾರೆ. ಬಳಿಕ ಅದರ ಮುಂದೆ ನಮಸ್ಕರಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
ಈ ಕ್ಲಿಪ್ ಅನ್ನು ಗುರುಪರಬ್ ಸಂದರ್ಭದಲ್ಲಿ ವಾಟ್ ದಿ ರೋಟಿ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಶೀಘ್ರದಲ್ಲೇ ಇದು ನಟ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಅವರ ಗಮನ ಸೆಳೆದಿದೆ. ಅವರು ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ.
ಇದು ತುಂಬಾ ಸಿಹಿಯಾದ ವಿಡಿಯೋ. ಅಜ್ಜಿ ಯಾರೆಂದು ತನಗೆ ಗೊತ್ತಿಲ್ಲ, ಆದರೆ ಅವರ ಬಗ್ಗೆ ತುಂಬಾ ಗೌರವ ಮತ್ತು ಪ್ರೀತಿ ಇದೆ ಎಂದು ದಿಲ್ಜಿತ್ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು 1,995,688 ವೀಕ್ಷಿಸಿದ್ದು, ನೂರಾರು ಕಾಮೆಂಟ್‌ಗಳನ್ನು ಸಂಗ್ರಹಿಸಲಾಗಿದೆ. ಕಾಮೆಂಟ್ ವಿಭಾಗವನ್ನು ನೆಟ್ಟಿಗರು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದ್ದಾರೆ.
https://youtu.be/UOmlf0wkN2E