ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ: ದಿ ರೈಸ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿದ್ದು, ಅದರ ಜನಪ್ರಿಯತೆ ಬಹಳ ಉತ್ತುಂಗಕ್ಕೇರಿದೆ. ಚಿತ್ರದ ಡೈಲಾಗ್‌ಗಳಿಂದ ಹಿಡಿದು ಹಾಡುಗಳವರೆಗೆ ಎಲ್ಲವೂ ಸೂಪರ್‌ಹಿಟ್ ಆಗಿವೆ. ಪುಷ್ಪಾ ಸಿನಿಮಾದ ಹಾಡುಗಳಿಗೆ ಜನರು ನೃತ್ಯ ಮಾಡುವ, ಸಂಭಾಷಣೆಗಳಿಗೆ ಲಿಪ್ ಸಿಂಕ್ ಮಾಡುವ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು.
ಇದೀಗ, ಊ ಅಂಟಾವಾ ಟ್ರೆಂಡಿಂಗ್ ಹಾಡಿಗೆ ದೇಸಿ ವಧು-ವರ ನೃತ್ಯ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಪ್ರಾಚಿ ಮೋರ್ ಮತ್ತು ರೋನಕ್ ಶಿಂಧೆ ಎಂಬ ನೂತನ ವಧು-ವರರು ತಮ್ಮ ಮದುವೆ ಸಮಾರಂಭದಲ್ಲಿ ಹಾಡಿನ ಆಕರ್ಷಕ ಬೀಟ್‌ಗಳಿಗೆ ಅದ್ಭುತವಾಗಿ ಕುಣಿದು ಕುಪ್ಪಳಿಸಿದ್ದಾರೆ. ಸಾಂಪ್ರದಾಯಿಕ ಮರಾಠಿ ಮದುವೆಯ ಉಡುಪನ್ನು ಧರಿಸಿದ್ದ ಜೋಡಿಯ ನೃತ್ಯ ಕಂಡು ನೆರೆದಿದ್ದ ಅತಿಥಿಗಳು ಹುರಿದುಂಬಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕೆಮಿಸ್ಟ್ರಿ ಸ್ಟುಡಿಯೋಸ್ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋವನ್ನು 2.3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ದೇಸಿ ಜೋಡಿಯ ನೃತ್ಯ ಕಂಡ ನೆಟ್ಟಿಗರು ಮನಸೋತಿದ್ದಾರೆ. ಅದರಲ್ಲೂ ವಧುವಿನ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಊ ಅಂಟಾವಾ ಹಾಡು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರದ ಜನಪ್ರಿಯ ಹಾಡಾಗಿದೆ. ಈ ಹಾಡಿನಲ್ಲಿ ಸಮಂತಾ ಪ್ರಭು ಕಾಣಿಸಿಕೊಂಡಿದ್ದು, ಇಂದ್ರಾವತಿ ಚೌಹಾಣ್ ಹಾಡಿದ್ದಾರೆ.
https://www.youtube.com/watch?v=mqsDnLN-CMA&feature=youtu.be