alex Certify ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….!

ವಧು – ವರರು ನವ ಜೀವನಕ್ಕೆ ಕಾಲಿಟ್ಟು ಕೆಲವು ನಿಮಿಷಗಳು ಕಳೆದಿರಲಿಲ್ಲ, ಅದಾಗಲೇ ವಧು ವರನ ಕಪಾಳಕ್ಕೆ ಬಿಗಿದ ಪ್ರಸಂಗವೊಂದು ನಡೆದಿದೆ.

ವಧು – ವರರು ಹಾರ ಬದಲಿಸಿಕೊಳ್ಳುವುದು ಹಿಂದೂ ವಿವಾಹಗಳ ಸಮಯದಲ್ಲಿ ನಿರ್ಣಾಯಕ ಆಚರಣೆಗಳಲ್ಲಿ ಒಂದಾಗಿದೆ, ಇದರಲ್ಲಿ ವಧು ಮತ್ತು ವರರು ಅಂಗೀಕಾರದ ಸಂಕೇತವಾಗಿ ಹೂವಿನ ಹಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಮದುವೆ ಸಮಾರಂಭ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್​ ವಿಡಿಯೋದಲ್ಲಿ, ವಧು ಮತ್ತು ವರರು ಪರಸ್ಪರ ಲಡ್ಡು ತಿನ್ನಿಸುತ್ತಾರೆ. ವರನು ಒತ್ತಾಯಪೂರ್ವಕವಾಗಿ ಲಡ್ಡು ತಿನ್ನಿಸುತ್ತಿದ್ದಂತೆ ವಧು, ವರನ ಕೆನ್ನೆಗೆ ಬಾರಿಸುತ್ತಾಳೆ. ವೊದಲು ದಂಪತಿಗೆ ಲಡ್ಡು ನೀಡಿದಾಗ, ಆತ ಬಾಯಿ ತೆರೆಯಲು ನಿರಾಕರಿಸುತ್ತಾನೆ, ಆದರೆ ವಧು ಬಗ್ಗುವಂತೆ ತೋರುತ್ತಿಲ್ಲ. ಲಡ್ಡು ತಿನ್ನುವಂತೆ ಒತ್ತಾಯಿಸುವುದನ್ನು ಮುಂದುವರೆಸುತ್ತಾಳೆ. ಕೊನೆಗೂ ಮೊದಲು ಕಷ್ಟಪಟ್ಟು ಬಾಯಿಗೆ ತುರುಕುತ್ತಾಳೆ.

ನಂತರ ವರನ ಸರದಿ. ಆತ ಸೇಡು ತೀರಿಸಿಕೊಳ್ಳುವಂತೆ ಆಕೆಯ ಬಾಯಿಗೆ ತುರುಕಲು ಯತ್ನಿಸುತ್ತಾನೆ. ಆಕೆ ಒಂದು ಹೆಜ್ಜೆ ಹಿಂದೆ ಇಡುತ್ತಾಳೆ. ಆದರೆ, ಈ ಬಾರಿ ವರನೇ ಆಕೆಗೆ ಲಡ್ಡು ತಿನ್ನುವಂತೆ ಬಲವಂತ ಮಾಡುತ್ತಾನೆ. ಅವಳು ಒಪ್ಪದೇ ಇದ್ದಾಗ, ಆಕೆಯ ಮುಖದ ಮೇಲೆ ಸಂರ್ಪೂಣ ಲಡ್ಡುವನ್ನು ತೀಡುತ್ತಾನೆ.

ಸಿಟ್ಟಿಗೆದ್ದ ವಧು ವೇದಿಕೆಯಲ್ಲಿ ಎಲ್ಲರ ಮುಂದೆ ವರನಿಗೆ ಕಪಾಳಮೋಕ್ಷ ಮಾಡಿಬಿಡುತ್ತಾಳೆ. ವೈರಲ್​ ವಿಡಿಯೊವನ್ನು ನಿರಂಜನ್​ ಮಹಾಪಾತ್ರ ಎಂಬ ಬಳಕೆದಾರರು ತಮಾಷೆ ಸಾಲುಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ಲಿಪ್​ ಆನ್​ಲೈನ್​ನಲ್ಲಿ ಕಾಣಿಸಿಕೊಂಡ ತಕ್ಷಣ, ನೆಟ್ಟಿಗರು ಕುತೂಹಲದಿಂದ ತೆಗೆದುಕೊಂಡರು. ಕೆಲವರು ನಗುವಿಗೆ ಸೀಮಿತಗೊಂಡರೆ ಮತ್ತೆ ಕೆಲವರು ಟೀಕಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...