ಮದುವೆ ಎಂಬ ಅತ್ಯಂತ ವಿಶೇಷ ಮತ್ತು ಸಡಗರದ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳನ್ನು ಹಿಡಿಯುವವರೇ ಇರಲ್ಲ. ಅವರ ಪಾಲಿಗೆ ಅದು ಜೀವನದ ಹೊಸ ಕಾಲಘಟ್ಟಕ್ಕೆ ಪ್ರವೇಶಿಸುವ ಸಮಾರಂಭ. ಹುಡುಗರಿಗೂ ಕೂಡ ಹೊಸ ಬಾಳ ಸಂಗಾತಿ ಒಲಿಯುವ ಮರೆಯಲಾರದ ಸಂದರ್ಭ.
ಈ ನಡುವೆ ಹುಡುಗಿ ಅಥವಾ ವಧುವಿನ ಮನೆಯವರು ತಮ್ಮ ಮನೆಮಗಳನ್ನು ಜೀವನ ಪರ್ಯಂತ ಮತ್ತೊಬ್ಬರ ಮನೆಗೆ ಕಳಿಸಿಕೊಡುವಾಗ ಹಲವು ನಿಮಿಷಗಳ ಕಾಲ ಭಾವುಕರಾಗುತ್ತಾರೆ. ಪೋಷಕರಂತೂ ಕಣ್ಣೀರಿನಲ್ಲೇ ವಿದಾಯ ಹೇಳುತ್ತಾರೆ. ಅದು ಅಲ್ಪ ಸಂತೋಷ, ಮತ್ತಷ್ಟು ದುಃಖದಿಂದ ಕೂಡಿರುತ್ತದೆ.
ಇವೆಲ್ಲಕ್ಕೂ ಅಪವಾದ ಎಂಬಂತೆ ಅಸ್ಮಿತಾ ಕೌಶಲ್ ಎಂಬ ನೂತನ ವಧುವು, ತಾಯಿಗಾಗಿ ತಾನು ಅಳಬೇಕಿದೆ ಎಂದು ಹೇಳಿದ್ದಾರೆ. ಮೇಕಪ್ ಹಾಕುವವರ ಎದುರು ಆಕೆಯು ಹೇಳಿರುವ ಮಾತುಗಳ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಭಾರಿ ವೈರಲ್ ಆಗಿದೆ. ವರ್ಲ್ಡ್ ಆಫ್ ಬ್ರೈಡ್ಸ್ ಎಂಬ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ.
ರಸ್ತೆಗೆ ಇಳಿಯಲು ಸಜ್ಜಾಗಿದೆ ಹೊಸ ’ಹಂಟರ್ 350’
’’ವಾಟರ್‌ಪ್ರೂಪ್ ಮಾಸ್ಕ್ ಹಾಕಿರುವ ಮೇಕಪ್ ಮಾಡಿದ್ದೀಯ ತಾನೇ? ನಾನು ವಿದಾಯದ ವೇಳೆ ಬಹಳ ಅಳಬೇಕಿದೆ. ತಾಯಿಗೆ ಸಮಾಧಾನಪಡಿಸಲು ಅಳುತ್ತಲೇ ಇರಬೇಕು….’’ ಎಂದು ಮೇಕಪ್ ಹಾಕಿದವರಿಗೆ ಅಸ್ಮಿತಾ ಪ್ರಶ್ನಿಸುತ್ತಿದ್ದಾರೆ.
ಒಟ್ಟಿನಲ್ಲಿ ಎಷ್ಟೇ ಅತ್ತರೂ, ಬಿಕ್ಕಳಿಸಿ, ಗಳಗಳನೇ ಕಣ್ಣೀರು ಸುರಿಸಿದರೂ ಕೂಡ ಆಕೆಯ ಮೇಕಪ್ ಮಾತ್ರ ಹಾಳಾಗಬಾರದಂತೆ. ನೋಡಿ ಹೇಗಿದೆ, ಈ ಹುಡುಗಿಯ ಆಗ್ರಹ. ಎಂಥ ಮೋಹವೇ ಹೆಣ್ಣೇ ನಿನಗೆ ಮೇಕಪ್ ಮೇಲೆ ಎಂದು ನೆಟ್ಟಿಗರು ಕಮೆಂಟ್‌ನಲ್ಲಿ ಟೀಕಿಸಿದ್ದಾರೆ. ಮತ್ತೆ ಕೆಲವು ಹುಡುಗಿಯರು, ಎಷ್ಟೊಂದು ಮುದ್ದಾಗಿದೆ ಈ ನವ ವಧುವಿನ ಆಗ್ರಹ ಎಂದು ಸ್ಮೈಲಿಗಳನ್ನು ಹಾಕಿದ್ದಾರೆ ಕೂಡ.
https://www.youtube.com/watch?v=fOlZ8JoobrE