ತಾಯಿ ಹಾಗೂ ಮಗಳ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮಗಳಿಗೆ ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭವಂತೂ ಆ ದುಃಖವನ್ನು ಹೇಳಲು ಸಾಧ್ಯವಿಲ್ಲ. ಮದುವೆ ಅಂತಾ ಸಡಗರ, ಖುಷಿ ಒಂದ್ಕಡೆಯಾದ್ರೆ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡಬೇಕಲ್ವಾ ಅಂತಾ ನೋವಿರುತ್ತದೆ. ಆದ್ರೆ, ಇಲ್ಲೊಂದೆಡೆ ಮದುವೆಯ ದಿನದಂದು ತಾಯಿ-ಮಗಳು ಡ್ಯಾನ್ಸ್ ಮಾಡಿದ್ದಾರೆ.
ವಿವಾಹ ಮಹೋತ್ಸವದಲ್ಲಿ ತಾಯಿ-ಮಗಳು ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಬಂದಂತಹ ಅತಿಥಿಗಳು ವಧು ಹಾಗೂ ತಾಯಿಯ ನೃತ್ಯ ನೋಡಿ ಮನಸೋತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಖತ್ ವೈರಲ್ ಆಗಿದೆ. ತಾಯಿ-ಮಗಳು ಇಬ್ಬರೂ ವೇದಿಕೆಯಲ್ಲಿ ಒಟ್ಟಿಗೆ ನೃತ್ಯ ಮಾಡಿದ್ದಾರೆ. ಇವರ ನೃತ್ಯಕ್ಕೆ ನೆಟ್ಟಿಗರು ವ್ಹಾವ್ ಎಂದು ಉದ್ಘರಿಸಿದ್ದಾರೆ.
ಲಾಟರಿ ಹೊಡೆದಿದೆ ಎಂದು ನಂಬಿಸಿ ಮಹಿಳೆಗೆ 3 ಲಕ್ಷ ರೂಪಾಯಿ ಪಂಗನಾಮ….!
ವಧುವನ್ನು ಮಲ್ಲಿಕಾ ಅಗರವಾಲ್ ಎಂದು ಗುರುತಿಸಲಾಗಿದೆ. ಮಾಯೆರಿ ಹಾಡಿಗೆ ತಾಯಿ-ಮಗಳು ಸುಂದರವಾದ ಸ್ಟೆಪ್ಸ್ ಹಾಕಿದ್ದು, ಭಾವಪೂರ್ಣವಾಗಿ ನೃತ್ಯ ಮಾಡಿದ್ದಾರೆ. ವಧು ಹಳದಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರೆ, ತಾಯಿ ಬೂದು ಬಣ್ಣದ ಸೀರೆ ಧರಿಸಿದ್ದಾರೆ. ಈ ರೋಮಾಂಚನಕಾರಿ ವಿಡಿಯೋ ಇದೀಗ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ.
https://www.youtube.com/watch?v=JqkwrOR5L8s