ದೇಶದಲ್ಲಿ ಸಂಪನ್ಮೂಲ ಹಂಚಿಕೆ ವಿಚಾರದಲ್ಲಿ ಸಾಕಷ್ಟು ವೈರುಧ್ಯವಿರುವ ಬಗ್ಗೆ ನಾವೆಲ್ಲಾ ಸಾಕಷ್ಟು ಕೇಳುತ್ತಲೇ ಇರುತ್ತೇವೆ. ಈ ಲಾಕ್‌ಡೌನ್ ಅವಧಿಯಲ್ಲಿ ಕೆಳಮಧ್ಯಮ ಹಾಗೂ ಬಡವರ್ಗದ ಕೋಟ್ಯಂತರ ಮಂದಿ ಬಹಳಷ್ಟು ಪರದಾಡುತ್ತಿದ್ದು, ಜೀವನೋಪಾಯಗಳನ್ನೇ ಕಳೆದುಕೊಂಡು ತಮ್ಮ ನಾಳೆಗಳನ್ನು ಅನಿಶ್ಚಿತತೆಯಲ್ಲೇ ಕಳೆಯುವಂತಾಗಿದೆ.
ಈ ಜ್ವಲಂತ ಪರಿಸ್ಥಿತಿಯನ್ನು ಹೈಲೈಟ್ ಮಾಡುವ ಉದ್ದೇಶದಿಂದ ಟ್ವಿಟರ್ ಬಳಕೆದಾರರೊಬ್ಬರು ಗ್ರಾಫಿಕ್ ಡಿಸೈನ್ ಸ್ಫರ್ಧೆಯನ್ನು ಆರಂಭಿಸಿದ್ದು, ದೇಶದ ಉಳ್ಳವರು ಹಾಗೂ ಉಳ್ಳದಿರುವವರ ನಡುವಿನ ಅಂತರವನ್ನು ರಾಚುವಂತೆ ತೋರುವ ಚಿತ್ರಗಳನ್ನು ಬರೆಯಲು ಕೋರಿದ್ದಾರೆ.
ಮೂರನೇ ಅಲೆಗೆ ಮೊದಲೇ ಮಹತ್ವದ ಕ್ರಮ: ಹಿರಿಯರಿಗೆ ಕೊಡುವ ಕೊರೋನಾ ಔಷಧ ಮಕ್ಕಳಿಗೆ ಬೇಡ; ಕೇಂದ್ರದಿಂದ ಮತ್ತಷ್ಟು ಮಾರ್ಗಸೂಚಿ ರಿಲೀಸ್
ಟ್ವೀಟ್‌ಗೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಈ ಚಿತ್ರವು ಸಾಕಷ್ಟು ಮೆಚ್ಚುಗೆಗಳನ್ನು ಗಿಟ್ಟಿಸಿದೆ. ಈ ಸ್ಫರ್ಧೆಯ ವಿಜೇತರಿಗೆ $100 ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು.