
ಭಾರತ ನನ್ನ ದೇಶ, ಆದರೆ ನನ್ನ ಸ್ಮಾರ್ಟ್ ಫೋನ್ ಚೀನಾ ಮೂಲದ್ದು, ಇದು ನಿಜವಾಗಲು ನಾನಾ…? (is that real me)..? ಎಂದು ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿರುವ ಲಾವಾ, ಭಾರತೀಯರು ಭಾರತದ ಕಂಪನಿಗಳು ತಯಾರಿಸುವ ಮೊಬೈಲ್ ಗಳನ್ನಷ್ಟೆ ಬಳಸಬೇಕು ಎಂದು ಹೇಳಿದೆ.
ಜೊತೆಗೆ ಭಾರತದ ಮಾರ್ಕೆಟ್ ನ ಆಳುತ್ತಿರುವ ರಿಯಲ್ ಮೀ ನಂತಹ ಚೈನೀಸ್ ಬ್ರ್ಯಾಂಡ್ ಫೋನ್ ಬದಲಿಗೆ ಭಾರತದ ಫೋನ್ ಗಳನ್ನ ಬಳಸಿ ಎಂದು ಹೇಳಿದೆ. ಅಲ್ಲದೆ ರಿಯಲ್ ಮೀ ಬದಲಾಗಿ ಉಚಿತವಾಗಿ ನೀಡುತ್ತಿರುವ ಲಾವಾ ಅಗ್ನಿ 5G ಭಾರತದಲ್ಲಿ ತಯಾರಾಗಿರುವ ಮೊದಲ 5G ಫೋನ್ ಎಂದು ಲಾವಾ ಕಂಪನಿ ಪ್ರಚಾರ ಮಾಡುತ್ತಿದೆ.
ಈ ಟ್ವೀಟ್ ನೋಡುತ್ತಿದ್ದಂತೆ ಹಲವು ನೆಟ್ಟಿಗರು ಲಾವಾ ಕಂಪನಿ ಭಾರತೀಯರ ಎಮೋಷನ್ಸ್ ಬಳಸಿಕೊಳ್ಳುತ್ತಿದೆ. ಭಾರತೀಯ ಅನ್ನೋ ಟ್ಯಾಗ್ ಬದಲು ಉತ್ತಮ ಉತ್ಪನ್ನಗಳನ್ನ ನೀಡಿದರೆ ಭಾರತೀಯರು ತಾವಾಗೆ ಖರೀದಿ ಮಾಡುತ್ತಾರೆ, ಎಂದಿದ್ದಾರೆ.
ರಿಯಲ್ ಮೀ ಚೈನೀಸ್ ಬ್ರ್ಯಾಂಡ್ ಆಗಿದ್ದರೂ ಭಾರತದಲ್ಲೆ ಮೊಬೈಲ್ ಗಳನ್ನ ಉತ್ಪಾದಿಸುತ್ತಿದೆ. ಅಷ್ಟೇ ಅಲ್ಲಾ ಭಾರತದಲ್ಲಿ ತಯಾರಾದ ಮೊಬೈಲ್ ಗಳನ್ನ ನೇಪಾಳ ಸೇರಿದಂತೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ. ರಿಯಲ್ ಮೀ ಮಾತ್ರವಲ್ಲ ಬಹುತೇಕ ಚೈನಾದ ಸ್ಮಾರ್ಟ್ ಪೋನ್ ಬ್ರ್ಯಾಂಡ್ ಗಳು ಭಾರತದಲ್ಲೆ ಉತ್ಪಾದನೆ ಶುರು ಮಾಡಿರುವುದು ಗಮನಾರ್ಹ.