ಪ್ರವೀಣ್ ಕುಮಾರ್ ಅಭಿನಯದ ದೇಸಾಯಿ ಎಂಬ ಕೌಟುಂಬಿಕ ಚಿತ್ರ ತನ್ನ ಟೀಸರ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದೆ. ದೇಸಾಯಿ ಸಿನಿಮಾದ ‘ಹೋಳಿ ಹುಣ್ಣಿಮೆ ಹಬ್ಬಕ್ಕ’ ಎಂಬ ಲಿರಿಕಲ್ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಸಂಜೆ 5:30ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ.
ನಾಗಿ ರೆಡ್ಡಿ ಭಡ ನಿರ್ದೇಶನದ ಈ ಚಿತ್ರವನ್ನು ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮಹಾಂತೇಶ್ ವಿ ಚೋಳಚ ಗುಡ್ಡ ನಿರ್ಮಾಣ ಮಾಡಿದ್ದು, ಪ್ರವೀಣ್ ಕುಮಾರ್ ಗೆ ಜೋಡಿಯಾಗಿ ರಾಧ್ಯ ಅಭಿನಯಿಸಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಪಿಕೆ ಎಚ್ ದಾಸ್ ಛಾಯಾಗ್ರಹಣವಿದೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ನೀಡಿದ್ದಾರೆ.