ಮೈಸೂರು : ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಅವರು ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಒಕ್ಕಲಿಗರು ಸುಸಂಸ್ಕೃತ ಪ್ರಾಣಿಗಳು ಅಥವಾ ಸಂಸ್ಕ್ರತಿ ಹೀನರು ಎಂದು ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಅವರು ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದೀಗ ಪ್ರೊ. ಕೆ.ಎಸ್ ಭಗವಾನ್ ವಿರುದ್ದ ಅಖಿಲ ಕರ್ನಾಟಕ ಒಕ್ಕಲಿಗ ಸಂಘದಿಂದ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕೂಡಲೇ ಭಗವಾನ್ ಅವರನ್ನು ಸರ್ಕಾರ ಬಂಧಿಸಬೇಕು. ಒಂದು ವೇಳೆ ಬಂಧಿಸದೇ ಹೋದರೆ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅಧ್ಯಕ್ಷ ಡಿ ಹನುಮಂತಯ್ಯ ಎಚ್ಚರಿಕೆ ನೀಡಿದ್ದಾರೆ.
ಒಕ್ಕಲಿಗರು ಸುಸಂಸ್ಕೃತ ಪ್ರಾಣಿಗಳು ಅಥವಾ ಸಂಸ್ಕ್ರತಿ ಹೀನರು ಎಂದು ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಅವರು ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ನನ್ನ ಅಭಿಪ್ರಾಯವಲ್ಲ, ಕುವೆಂಪು ಅವರ ಅಭಿಪ್ರಾಯ. “ಇದನ್ನು ನಾನು ಹೇಳಿದ್ದಲ್ಲ… ಕುವೆಂಪು ಅವರೇ ಹೇಳಿರೋದು. ಅವರು ಹೇಳಿದ್ದನ್ನು ನಾನಿಲ್ಲಿ ಉಲ್ಲೇಖ ಮಾಡುತ್ತಿದ್ದೇನಷ್ಟೇ’’ ಎಂದು ಹೇಳಿದ್ದರು.
ಮಹಿಷ ಉತ್ಸವದ ಸಂದರ್ಭದಲ್ಲಿ ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ವಿವಿಧ ಒಕ್ಕಲಿಗ ಸಂಘಟನೆಗಳು ನಗರದ ಕುವೆಂಪು ನಗರದಲ್ಲಿರುವ ಅವರ ನಿವಾಸದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ್ದವು.