ಚಂಡೀಘಡ; ಸ್ವಯಂ ಘೋಷಿತ ದೇವಮಾನವ ಡೆರಾ ಸಚ್ಚಾಸೌದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಒಂದು ತಿಂಗಳ ಕಾಲ ಸುದೀರ್ಘ್ ಪೆರೋಲ್ ನೀಡಿ ಹರ್ಯಾಣ ಕೋರ್ಟ್ ಆದೇಶ ನೀಡಿದೆ.
2017ರಲ್ಲಿ ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆಯೇ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್ಮಿತ್ ರಾಮ್ ರಹೀಮ್ ಸಿಂಗ್ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಹರ್ಯಾಣದ ರೊಹಟಕ್ ಜೈಲಿನಲ್ಲಿರುವ ರಾಮ್ ರಹೀಮ್ ಸಿಂಗ್ ಗೆ ಇದೀಗ ಒಂದು ತಿಂಗಳ ಕಾಲ ಪೆರೋಲ್ ನೀಡಲಾಗಿದ್ದು, ಇಂದು ಜೈಲಿನಿಂದ ಹೊರಬರಲಿದ್ದಾರೆ.