![](https://kannadadunia.com/wp-content/uploads/2025/02/rudrappa-lamani.jpg)
ದಾವಣಗೆರೆ: ಕಬಡ್ಡಿ ಆಟಕ್ಕೆ ಚಾಲನೆ ನೀಡಿ, ಆಡಲು ಹೋಗಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆದಿದೆ.
ಸೇವಾಲಾಲ್ ಜಯಂತೋಸವದಲ್ಲಿ ಕಬಡ್ಡಿ ಆಟ ಆಯೋಜಿಸಲಾಗಿತ್ತು. ಕಬಡ್ಡಿ ಆಟಕ್ಕೆ ಚಾಲನೆ ನೀಡಿ, ರೇಡಿಂಗ್ ಗೆ ಹೋಗುವಾಗ ಉಪಸಭಾಪತಿ ರುದ್ರಪ್ಪ ಲಮಾಣಿ ಆಯತಪ್ಪಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಆಟಗಾರರು ಅವರನ್ನು ಮೇಲಕೆತ್ತಿದ್ದಾರೆ.
ರುದ್ರಪ್ಪ ಲಮಾಣಿ ಅವರ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.