ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಶಾಂತಿ ಪ್ರಶಸ್ತಿ ಈ ಬಾರಿ ಯಾರಿಗೆ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಷ್ಯಾ – ಉಕ್ರೇನ್ ಯುದ್ದ ನಡೆಸುತ್ತಿರುವ ಮಧ್ಯೆ ಸಹಜವಾಗಿಯೇ ಈ ಪ್ರಶಸ್ತಿ ಯಾರಿಗೆ ಸಲ್ಲುತ್ತದೆ ಎಂಬ ನಿರೀಕ್ಷೆ ಸಹಜವೂ ಕೂಡಾ ಹೌದು.
ಇದರ ನಡುವೆ ನೊಬೆಲ್ ಪ್ರಶಸ್ತಿ ಸಮಿತಿ ಉಪ ಮುಖ್ಯಸ್ಥ ಅಸಲ್ ತೋಜೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಗೆ ದೊಡ್ಡ ಸ್ಪರ್ಧಿ ಎನ್ನುವ ಮೂಲಕ ಮೋದಿಯವರಿಗೆ ಈ ಪ್ರಶಸ್ತಿ ದೊರೆಯುವ ಸುಳಿವು ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅಸಲ್ ತೋಜೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವದ ಶಾಂತಿಯ ಅತ್ಯಂತ ವಿಶ್ವಾಸಾರ್ಹ ಮುಖ ಎಂದು ಬಣ್ಣಿಸಿದ್ದಾರೆ.
ಮೋದಿಯವರ ಅಭಿಮಾನಿಯಾಗಿಯೂ ಆಗಿರುವ ಅಸಲ್ ತೋಜೆ, ಪ್ರಧಾನಿ ಮೋದಿಯವರು ಜಗತ್ತಿನಲ್ಲಿ ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಭಾರತ ಶ್ರೀಮಂತ ಹಾಗೂ ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದು, ಅತ್ಯಂತ ಅರ್ಹ ನಾಯಕ ಪ್ರಧಾನಿ ಮೋದಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದರೆ ಅದು ಐತಿಹಾಸಿಕವಾಗಲಿದೆ ಎಂದು ತಿಳಿಸಿದ್ದಾರೆ.
https://twitter.com/MeghUpdates/status/1635987710786830342?ref_src=twsrc%5Etfw%7Ctwcamp%5Etweetembed%7Ctwterm%5E1635987710786830342%7Ctwgr%5E3c6bf7b051d02d70b8619e6e212750c55d75070c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fhindi%2Flatestlyhindi-epaper-dh9be9acbd9792411390454cf890a581ca%2Fnobelpeaceprizepiemnarendrmodikomileganobelshantipuraskarasaltojenebatayasabasebadadavedar-newsid-n480602416