ಇತ್ತೀಚಿನ ದಿನಗಳಲ್ಲಿ ಖಿನ್ನತೆ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆಗಳಲ್ಲೊಂದು. ಇದೊಂದು ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು ದುಃಖ, ಆತಂಕ ಮತ್ತು ಹತಾಶೆಯ ಭಾವನೆಗಳನ್ನು ಉಂಟುಮಾಡುತ್ತದೆ. ಜೆನೆಟಿಕ್ಸ್, ಜೀವನದ ಅನುಭವಗಳು ಮತ್ತು ಒತ್ತಡ ಹೀಗೆ ಖಿನ್ನತೆಗೆ ಹಲವು ಕಾರಣಗಳಿರಬಹುದು. ಖಿನ್ನತೆಯ ಚಿಕಿತ್ಸೆಗೆ ಆಯುರ್ವೇದದಲ್ಲಿ ಅನೇಕ ನೈಸರ್ಗಿಕ ಪರಿಹಾರಗಳಿವೆ. ಕೆಲವು ಗಿಡಮೂಲಿಕೆಗಳ ಬಳಕೆಯಿಂದ ಖಿನ್ನತೆಯನ್ನು ನಿವಾರಿಸಬಹುದು. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಗಿಡಮೂಲಿಕೆಗಳ ಬಗ್ಗೆ ತಿಳಿದುಕೊಳ್ಳೋಣ.
ಅಶ್ವಗಂಧ
ಅಶ್ವಗಂಧವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಶ್ವಗಂಧ ಸೇವನೆಯಿಂದ ಮನಸ್ಥಿತಿಯನ್ನು ಸುಧಾರಿಸುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.
ಬ್ರಾಹ್ಮಿ
ಬ್ರಾಹ್ಮಿ ಗಿಡಮೂಲಿಕೆ ಮೆದುಳನ್ನು ಶಾಂತಗೊಳಿಸಲು ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಆತಂಕ ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
ಶತಾವರಿ
ಶತಾವರಿಯು ನರಮಂಡಲವನ್ನು ಬಲಪಡಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಆತಂಕವನ್ನು ಕಡಿಮೆ ಮಾಡುತ್ತದೆ.
ತುಳಸಿ
ತುಳಸಿ ಸೇವನೆಯಿಂದ ಕೂಡ ಒತ್ತಡ ಹಾಗೂ ಆತಂಕ ನಿವಾರಣೆಯಾಗುತ್ತದೆ. ಇದು ಕೂಡ ಮನಸ್ಸಿನ ನೆಮ್ಮದಿಯನ್ನು ಕಾಪಾಡಲು ಸಹಕರಿಸುತ್ತದೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಜಟಾಮಾಂಸಿ
ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಗಿಡಮೂಲಿಕೆಯಾಗಿದೆ. ಇದನ್ನು ಸೇವನೆ ಮಾಡುವುದರಿಂದ ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ಜಟಾಮಾಂಸಿಯನ್ನು ಚಹಾ, ಕ್ಯಾಪ್ಸುಲ್ ಅಥವಾ ಪುಡಿ ರೂಪದಲ್ಲಿ ಬಳಸಬಹುದು. ಆದರೆ ಈ ಗಿಡಮೂಲಿಕೆಗಳನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.