ಸಾಮಾನ್ಯವಾಗಿ ನಾವು ಪ್ರೀತಿಯಲ್ಲಿ ಬಿದ್ದಾಗ ರೋಮ್ಯಾಂಟಿಕ್ ಹಾಡು ಕೇಳಲು ಇಷ್ಟಪಡುತ್ತೇವೆ. ನೋವಿನಲ್ಲಿದ್ದಾಗ, ನೋವಿನ ಹಾಡುಗಳು ಮನಸ್ಸಿಗೆ ಹಿತ ನೀಡುತ್ತವೆ. ಆದ್ರೆ ಒಂದು ಹಾಡು ವಿಚಿತ್ರವಾಗಿದೆ. ಈ ಹಾಡನ್ನು ಕೇಳಿದ್ರೆ ಮನಸ್ಸಿಗೆ ನೋವಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತದೆ.
ಹೌದು, ಈ ಹಾಡನ್ನು ಹಂಗೇರಿಯನ್ ಸುಸೈಡ್ ಸಾಂಗ್ ಎಂಬ ಕರೆಯಲಾಗುತ್ತದೆ. ಈ ಹಾಡನ್ನು ಈಗ ನಿಷೇಧಿಸಲಾಗಿದೆ. 62 ವರ್ಷಗಳಿಂದ ಈ ಹಾಡು ನಿಷೇಧದಲ್ಲಿದೆ. ಈ ಹಾಡನ್ನು ಗ್ಲೂಮಿ ಸಂಡೆ ಎಂಬ ಹೆಸರಿನಲ್ಲಿ ಮಾಡಲಾಗಿತ್ತು. ಈ ಹಾಡನ್ನು ಹಂಗೇರಿಯನ್ ಸಂಯೋಜಕ ರೆಜ್ಸೊ ಸೆರೆಸ್ ಸಂಯೋಜಿಸಿದ್ದಾರೆ.
ರೆಸ್ಸೊ ಈ ಹಾಡನ್ನು 1933 ರಲ್ಲಿ ‘ಗ್ಲೂಮಿ ಸಂಡೆ’ ಅಥವಾ ‘ಸ್ಯಾಡ್ ಸಂಡೆ’ ಹೆಸರಿನಲ್ಲಿ ಸಂಯೋಜಿಸಿದ್ದಾರೆ. ಪ್ರೀತಿ ಕಳೆದುಕೊಂಡ ಅವರು, ಪ್ರೀತಿಯಿಂದ ಕನೆಕ್ಟ್ ಮಾಡಿ ಈ ಹಾಡನ್ನು ಮಾಡಿದ್ದಾರೆ.
ಆದರೆ ಈ ಹಾಡನ್ನು ಕೇಳ್ತಿದ್ದಂತೆ ಕೇಳುಗ ಅಳಲು ಶುರು ಮಾಡ್ತಾನೆ. ಹಾಡು ಕೇಳಿ ಅದೆಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ಲೂಮಿ ಸಂಡೆ ಹಾಡು ಕೇಳಿ ಬರ್ಲಿನ್‌ನಲ್ಲಿ ಮೊದಲು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು.
ಹಾಡು ಕೇಳಿ ದುಃಖಿತನಾಗಿದ್ದ ಹುಡುಗ ಶೂಟ್ ಮಾಡಿಕೊಂಡಿದ್ದ. ನ್ಯೂಯಾರ್ಕ್ ನಲ್ಲಿ ಹಾಡನ್ನು ಕೇಳಿ ವೃದ್ಧರೊಬ್ಬ 7ನೇ ಮಹಡಿಯಿಂದ ಜಿಗಿದಿದ್ದ. ಇದಲ್ಲದೇ ಹಂಗೇರಿಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಹಾಡು ಕೇಳಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಹಾಡು ಕೇಳಿ, ಆತ್ಮಹತ್ಯೆಯ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಈ ಹಾಡಿಗೆ ನಿಷೇಧ ಹೇರಲಾಯ್ತು. ಈ ಹಾಡನ್ನು 1941 ರಲ್ಲಿ ನಿಷೇಧಿಸಲಾಯಿತು. ಆದ್ರೆ ಈ ಹಾಡು ಕೇಳಿದ ನಂತರ ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಎಂಬುದು ಇನ್ನೂ ತಿಳಿದಿಲ್ಲ.