ಫಿಕ್ಸೆಡ್ ಡೆಫಾಸಿಟ್ ಬಡ್ಡಿ ದರದಲ್ಲಿ ಇಳಿಕೆಯಾಗಿದೆ. ಎಫ್ ಡಿ ಬಡ್ಡಿ ದರ ಇಳಿಕೆಯಾಗ್ತಿದ್ದಂತೆ ಜನರು ತಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿಡಲು ಶುರು ಮಾಡಿದ್ದಾರೆ. ಎಫ್ಡಿಯಂತೆ ಉಳಿತಾಯ ಖಾತೆಯಲ್ಲೂ ಅನೇಕ ಲಾಭವಿದೆ. ಹಣ ಸುರಕ್ಷಿತವಾಗಿರುವುದಲ್ಲದೆ ಹಣಕ್ಕೆ ಬಡ್ಡಿ ಸಿಗುತ್ತದೆ.
ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು, ಉಳಿತಾಯ ಖಾತೆಯ ಸೌಲಭ್ಯವನ್ನು ಒದಗಿಸುತ್ತವೆ. ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ನಂತಹ ದೊಡ್ಡ ಖಾಸಗಿ ಬ್ಯಾಂಕುಗಳಿಗಿಂತ ಸಣ್ಣ ಖಾಸಗಿ ಬ್ಯಾಂಕುಗಳು, ಉಳಿತಾಯ ಖಾತೆಗಳಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ.
ಡಿಸಿಬಿ ಬ್ಯಾಂಕ್ : ಈ ಬ್ಯಾಂಕಿನ ಉಳಿತಾಯ ಖಾತೆಗಳ ಮೇಲೆ ಶೇಕಡಾ 6.75 ರಷ್ಟು ಬಡ್ಡಿ ಸಿಗುತ್ತದೆ. ಖಾಸಗಿ ಬ್ಯಾಂಕುಗಳಲ್ಲಿಯೇ ಡಿಸಿಬಿ ಬ್ಯಾಂಕ್, ಉಳಿತಾಯ ಖಾತೆಗೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಆಗಿದೆ.
ಆರ್ಬಿಎಲ್ ಬ್ಯಾಂಕ್ : ಈ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6 ರಷ್ಟು ಬಡ್ಡಿದರವನ್ನು ನೀಡುತ್ತಿದೆ.
ಬಂಧನ್ ಬ್ಯಾಂಕ್ : ಬಂಧನ್ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಶೇಕಡಾ 6 ರಷ್ಟು ಬಡ್ಡಿದರವನ್ನು ನೀಡುತ್ತಿದೆ.
ಎಸ್ ಬ್ಯಾಂಕ್ : ಎಸ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯುವ ಗ್ರಾಹಕ, ಶೇಕಡಾ 5.25ರಷ್ಟು ಬಡ್ಡಿಯನ್ನು ಪಡೆಯುತ್ತಾನೆ.