ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿವಿಧ ವಿಮಾ ಕಂಪೆನಿಗಳ ಸಹಯೋಗದೊಂದಿಗೆ ಅಪಘಾತ ವಿಮೆಯನ್ನು ಒದಗಿಸಲು ವಿಶೇಷ ಅಭಿಯಾನ ನಡೆಸುತ್ತಿದೆ.
18 ರಿಂದ 65 ವರ್ಷ ವಯಸ್ಸಿನ ಒಳಗೆ ಇರುವವರು ವಾರ್ಷಿಕ 549 ರೂ. ಅಥವಾ 749 ರೂ. ಪ್ರೀಮಿಯಂನೊಂದಿಗೆ ಸಮಗ್ರ ಅಪಘಾತ ವಿಮಾ ಯೋಜನೆಯ ಫಲಾನುಭವಿಗಳಾಗಬಹುದು. ಅಪಘಾತದಿಂದ ಆಗುವ ಸಾವುಗಳು ಅಂದರೆ, ರಸ್ತೆ ಅಪಘಾತ, ಹಾವು ಕಡಿತ, ಬೆಂಕಿ, ವಿದ್ಯುದಾಘಾತ, ಸಿಡಿಲು, ನೀರಲ್ಲಿ ಮುಳುಗುವಿಕೆ ಮತ್ತಿತರ ಈ ಯೋಜನೆಯಲ್ಲಿ ಒಳಪಡಿಸಲಾಗಿದೆ.
ಮೃತರ ಸಂಬಂಧಿಕರು ಕ್ರಮವಾಗಿ 549 ರೂ. ವಿಮಾ ಯೋಜನೆಗೆ 10 ಲಕ್ಷ ರೂ. ಹಾಗೂ 749 ರೂ. ಯೋಜನೆಗಳಿಗೆ 15 ಲಕ್ಷ ರೂ. ವಿಮೆಯನ್ನು ಪಡೆಯುತ್ತಾರೆ. 60 ಸಾವಿರ ರೂ.ಗಳವರೆಗೆ ಒಳ ರೋಗಿ ವೆಚ್ಚ ಹಾಗೂ 30 ಸಾವಿರ ರೂ.ವರೆಗಿನ ಹೊರ ರೋಗಿ ವೆಚ್ಚವನ್ನು ಈ ಯೋಜನೆಯು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.