ಮಡಿಕೇರಿ: ಕೊಡಗು ವ್ಶೆದ್ಯಕೀಯ ವಿಜ್ಞಾನ ಮತ್ತು ಬೋಧಕ ಆಸ್ಪತ್ರೆ ವತಿಯಿಂದ ಜುಲೈ 11 ರಿಂದ 16 ರವರೆಗೆ ಕೊಡಗು ವೈದ್ಯಕೀಯ ವಿಜ್ಞಾನ ಮತ್ತು ಬೋಧಕ ಆಸ್ಪತ್ರೆ(ಜಿಲ್ಲಾ ಆಸ್ಪತ್ರೆ) ಯಲ್ಲಿ ದಂತ ಚಿಕಿತ್ಸಾ ವಿಭಾಗ ಇದರ ಸಹಯೋಗದಲ್ಲಿ ದಂತ ಭಾಗ್ಯ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಈ ದಂತ ಭಾಗ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೃತಕ ದಂತ ಪಂಕ್ತಿಯನ್ನು ಅಳವಡಿಸಲಾಗುವುದು. ಫಲಾನುಭವಿಗಳು ಬಿಪಿಎಲ್ ಕಾರ್ಡ್ ಪಡಿತರ ಚೀಟಿ ಹೊಂದಿರತಕ್ಕದ್ದು. 45 ವರ್ಷ ಮೇಲ್ಪಟ್ಟ ವಯಸ್ಕರು, ಸಂಪೂರ್ಣ ಅಥವಾ ಭಾಗಶಃ (3 ಅಥವಾ ಅದಕ್ಕಿಂತ ಹೆಚ್ಚು) ಹಲ್ಲುಗಳನ್ನು ಕಳೆದುಕೊಂಡವರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಹಾಜರಾಗುವ ಫಲಾನುಭವಿಗಳು ತಮ್ಮ ಬಿಪಿಎಲ್ ಕಾರ್ಡ್(ಪಡಿತರ ಚೀಟಿ), 2 ಭಾವ ಚಿತ್ರ ಹಾಗೂ ಆಧಾರ್ ಕಾರ್ಡ್‍ನ್ನು ತಪ್ಪದೇ ತರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.