ಕೊಲ್ಕತ್ತಾದ ನ್ಯೂಟೌನ್ನಲ್ಲಿರುವ ಕರಿಗರಿ ಭವನ ಕಚೇರಿಯಲ್ಲಿ ರಜೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಅಮಿತ ಕುಮಾರ್ ಸರ್ಕಾರ್ ಎಂಬ ಉದ್ಯೋಗಿಯೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರ್ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಜೆಗಾಗಿ ಮನವಿ ಸಲ್ಲಿಸಿದ್ದ ಇವರಿಗೆ ರಜೆ ನಿರಾಕರಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಸರ್ಕಾರ್ ತನ್ನ ಸಹೋದ್ಯೋಗಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ನಂತರ, ರಕ್ತಸಿಕ್ತ ಚಾಕುವಿನೊಂದಿಗೆ ಸರ್ಕಾರ್ ಕಚೇರಿಯ ಆವರಣದಲ್ಲಿ ತಿರುಗಾಡುತ್ತಿದ್ದು, ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ಫೋನ್ಗಳಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ, ಹತ್ತಿರ ಬರಬೇಡಿ ಎಂದು ಆತ ಜನರಿಗೆ ಎಚ್ಚರಿಕೆ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಜಯದೇವ್ ಚಕ್ರವರ್ತಿ, ಶಾಂತನು ಸಹಾ, ಸಾರ್ಥ ಮತ್ತು ಶೇಕ್ ಸತಬುಲ್ ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸರ್ಕಾರ್ನನ್ನು ಪೊಲೀಸರು ಬಂಧಿಸಿದ್ದು, ಈ ಘಟನೆಗೆ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆ ಮುಂದುವರಿಸಿದ್ದಾರೆ. ಸರ್ಕಾರ್ಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
![Kolkata Knife Attack: Govt Employee Stabs Colleagues Over Denial of Leave, Threatens Cops| Video | Republic World](https://img.republicworld.com/all_images/whatsappvideo2025-02-06at2.33.51pm-ezgif.com-speed-1738832977704-16_9.gif)