ಕಾರವಾರ: ರಾಜ್ಯಾದ್ಯಂತ ಮಹಾಮಾರಿ ಡೆಂಘ್ಯೂ ಪ್ರಕರಣ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಘೀ ಸೋಂಕಿಗೆ ಮೊದಲ ಬಲಿಯಾಗಿದೆ.
ಹರೇರಾಮ್ ಗೋಪಾಲ್ ಭಟ್ ಎಂಬುವವರು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹರೇರಾಮ್ ಗೋಪಾಲ್ ಭಟ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಹರೇರಾಮ್ ಗೋಪಾಲ್ ಭಟ್ ಅಂಕೊಲಾ ತಾಲೂಕಿನ ಬಾವಿಕೆರೆ ನಿವಾಸಿಯಾಗಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಒಂದುವಾರದಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಹರೇರಾಮ್ ಭಟ್ ಸಾವನ್ನಪ್ಪಿದ್ದು, ಡೆಂಘೀ ಮಹಾಮಾರಿಯಿಂದ ಸಾವನ್ನಪ್ಪಿದ್ದಾಗಿ ದೃಢಪಟ್ಟಿದೆ.