ಬೆಂಗಳೂರು: ಡೆಂಘೀ ಪರೀಕ್ಷೆಗೆ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡೆಂಘೀ ಸಂಪೂರ್ಣ ಪರೀಕ್ಷೆಗೆ 600 ರೂ. ನಿಗದಿಪಡಿಸಲಾಗಿದೆ.
ಡೆಂಘೀ ಪ್ರತಿ ಟೆಸ್ಟ್ ಗೆ 300 ರೂ. ನಿಗದಿಪಡಿಸಲಾಗಿದೆ. ಡೆಂಘೀಗೆ ಎರಡು ಮಾದರಿಯ ಪರೀಕ್ಷೆ ಮಾಡಬೇಕಿದೆ. ಹೀಗಾಗಿ ಪ್ರತಿ ಪರೀಕ್ಷೆಗೆ 300 ರೂ.ದರವನ್ನು ಸರ್ಕಾರ ನಿಗದಿಪಡಿಸಿದೆ. 2016ರಲ್ಲಿ ನಿಗದಿಯಾಗಿದ್ದ ದರಗಳ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಲ್ಯಾಬ್ ಗಳಿಗೆ ಈ ದರ ಅನ್ವಯವಾಗಲಿದೆ.
IgM ಪರೀಕ್ಷೆಗೆ 300 ರೂ. ದರ ನಿಗದಿಗೊಳಿಸಲಾಗಿದೆ.
ಸ್ಕ್ರೀನಿಂಗ್ ಪರೀಕ್ಷೆ, ರ್ಯಾಪಿಡ್ ಕಾರ್ಡ್ ಟೆಸ್ಟ್ ಹಾಗೂ IgG ಟೆಸ್ಟ್ ಗೆ 250 ರೂ. ದರ ನಿಗದಿಪಡಿಸಲಾಗಿದೆ.
NS1 ಪರೀಕ್ಷೆಗೆ 300 ರೂ. ದರ ನಿಗದಿಗೊಳಿಸಲಾಗಿದೆ.