
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಘೀ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 155 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 6831ಕ್ಕೆ ಏರಿಕೆಯಾಗಿದೆ.
142 ಸಕ್ರಿಯ ಪ್ರಕರಣಗಳು ಇವೆ. ಇಂದು ಒಂದೇ ದಿನ 53,113 ಸೀರಮ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. 343 ಡೆಂಘೀ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ರಾಜ್ಯದಲ್ಲಿ ಇದುವರೆಗೆ ಡೆಂಘೀ ಸೋಂಕಿನಿಂದ ಆರು ಜನ ಸಾವನ್ನಪ್ಪಿದ್ದಾರೆ.