
ಹಾಸನ: ಮಹಾಮಾರಿ ಡೆಂಘೀ ಜ್ವರಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಹಾಸನ ಜಿಲ್ಲೆಯಲ್ಲಿ ನಿನ್ನೆ 13 ವರ್ಷದ ಬಾಲಕಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾಳೆ.
ಅರಕಲಗೂಡು ಮೂಲದ ಬಾಲಕಿ ಅಕ್ಷತಾ ಮೃತಪಟ್ಟವರು. ಬೊಮ್ಮನಾಯಕನಹಳ್ಳಿಯಲ್ಲಿ ಅಕ್ಷತಾ ಕುಟುಂಬ ನೆಲೆಸಿತ್ತು. ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ ಅಕ್ಷತಾ ಏಳನೇ ತರಗತಿ ಓದುತ್ತಿದ್ದಳು. ಅಪ್ಪಣ್ಣ ಶೆಟ್ಟಿ- ಪದ್ಮಾ ದಂಪತಿಯ ಪುತ್ರಿ ಅಕ್ಷತಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.