alex Certify BIG NEWS: ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ: ಸ್ವಚ್ಛತೆ ಕಾಯ್ದುಕೊಳ್ಳದವರಿಗೆ ಭಾರೀ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆಗೆ ತಿದ್ದುಪಡಿ: ಸ್ವಚ್ಛತೆ ಕಾಯ್ದುಕೊಳ್ಳದವರಿಗೆ ಭಾರೀ ದಂಡ

ಬೆಂಗಳೂರು: ಡೆಂಘೀ ಜ್ವರವನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಡೆಂಘಿ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಾಂಕ್ರಾಮಿಕ ರೋಗಗಳ ಕಾಯ್ದೆ-2020ರ ಅಡಿಯ ನಿಯಮಗಳಿಗೆ ತಿದ್ದುಪಡಿ ಮಾಡಿ, “ಕರ್ನಾಟಕ ಸಾಂಕ್ರಾಮಿಕ ರೋಗಗಳು(ತಿದ್ದುಪಡಿ ನಿಯಮಗಳು)2024” ಎಂಬ ಶೀರ್ಷಿಕೆಯಡಿ ಅಧಿಸೂಚನೆ ಹೊರಡಿಸಲಾಗಿದೆ.

ಸ್ವಚ್ಛತೆ ಕಾಯ್ದುಕೊಳ್ಳದೆ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗಲು ಅವಕಾಶ ಮಾಡಿಕೊಟ್ಟರೆ ದಂಡ ವಿಧಿಸಲಾಗುವುದು

ನಗರ ಪ್ರದೇಶದ ದಂಡದ ವಿವರ

400 ರೂ. – ಕುಟುಂಬಗಳಿಗೆ

1,000 ರೂ. – ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ

2,000 ರೂ. – ಖಾಲಿ ನಿವೇಶನಗಳಿಗೆ

ಗ್ರಾಮೀಣ ಪ್ರದೇಶದ ದಂಡದ ವಿವರ

200 ರೂ. – ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಿಗೆ

500 ರೂ. – ಗ್ರಾಮೀಣ ಪ್ರದೇಶದ ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳಿಗೆ

1,000 ರೂ. -ಖಾಲಿ ನಿವೇಶನಗಳಿಗೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...