ಕುಮಟಾ : ಬಾಬ್ರಿ ಮಸೀದಿಯಂತೆ ಆದಂತೆ ಚಿನ್ನದಪಳ್ಳಿ ಮಸೀದಿ ನಿರ್ನಾಮವಾಗಲಿದೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಬಾಬ್ರಿ ಮಸೀದಿಯಂತೆ ಭಟ್ಕಳದಲ್ಲಿರುವ ಚಿನ್ನದಪಳ್ಳಿ ಮಸೀದಿ ನಿರ್ನಾಮವಾಗಲಿದೆ, ಇದನ್ನು ಬೆದರಿಕೆ ಅಂತ ಬೇಕಾದರೂ ತಿಳಿದುಕೊಳ್ಳಿ . ಇದು ಅನಂತ್ ಕುಮಾರ್ ಹೆಗಡೆ ತೀರ್ಮಾನವಲ್ಲ, ಇದು ಹಿಂದೂ ಸಮಾಜದ ತೀರ್ಮಾನ ಎಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದರು.
ಭಟ್ಕಳದ ಚಿನ್ನಪಲ್ಲಿಯಲ್ಲಿರುವಂತ ಮಸೀದಿಯ ಗೋಪುರ ಚಿನ್ನದ ಲೇಪಿತದಂತೆ ಇದ್ದು, ಇದು ಹಿಂದೂ ದೇವಾಲಯದ ಮಾದರಿಯಲ್ಲಿ ಇದೆ ಎನ್ನಲಾಗುತ್ತಿದೆ. ಇಂತಹ ಮಸೀದಿ ಕೂಡ ಬಾಬ್ರಿ ಮಸೀದಿ ಥರ ನಿರ್ನಾಮ ಆಗಲಿದೆ ಎಂದು ಹೇಳಿಕೆ ನೀಡಿದ್ದಾರೆ.