alex Certify ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ : ‘ರೀಲ್ಸ್’ ಮಾಡಿ ಆಕರ್ಷಕ ‘ಬಹುಮಾನ ‘ಗೆಲ್ಲಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ : ‘ರೀಲ್ಸ್’ ಮಾಡಿ ಆಕರ್ಷಕ ‘ಬಹುಮಾನ ‘ಗೆಲ್ಲಿ.!

ಬೆಂಗಳೂರು : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರೀಲ್ಸ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.

ಪೋಸ್ಟರ್ನಲ್ಲಿ ಉಲ್ಲೇಖಿಸಲಾದ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು 40 ರಿಂದ 60 ಸೆಕೆಂಡುಗಳ ರೀಲ್ಸ್ ಅನ್ನು ಸೃಷ್ಟಿಸಿ ರೀಲ್ಸ್ ಮಾಡಬಹುದಾಗಿದೆ.

ನಿಮ್ಮ ಇನ್ಸ್ಟಾಗ್ರಾಮ್, ಎಕ್ಸ್, ಫೇಸ್ಬುಕ್ ಅಥವಾ ಯೂಟ್ಯೂಬ್ ಖಾತೆಯಲ್ಲಿ *#ಕರ್ನಾಟಕ_ಪ್ರಜಾಪ್ರಭುತ್ವ_ದಿನ_2024* ಎಂಬ ಹ್ಯಾಷ್ಟ್ಯಾಗ್ನೊಂದಿಗೆ ರೀಲ್ಸ್ ಪೋಸ್ಟ್ ಮಾಡಿ. ಬಳಿಕ ಲಿಂಕ್ ಅನ್ನು https://democracydaykarnataka.in/contest/video ಇಲ್ಲಿ ಹಂಚಿಕೊಳ್ಳಿ. ಸೆಪ್ಟೆಂಬರ್ 15ರ ಒಳಗಾಗಿ ರೀಲ್ಸ್ ಕಳುಹಿಸಬೇಕು. ಅತ್ಯುತ್ತಮ 10 ವಿಡಿಯೋಗಳಿಗೆ ತಲಾ 15,000 ರೂ. ಮೌಲ್ಯದ ಬಹುಮಾನಗಳು ಸಿಗಲಿದೆ ಎಂದು ಸರ್ಕಾರ ಪ್ರಕಟಣೆ ತಿಳಿಸಿದೆ.

ವಿಷಯ:
• ಭಾರತವು ಪ್ರಜಾಪ್ರಭುತ್ವವನ್ನು ಏಕೆ ಆಯ್ಕೆ ಮಾಡಿತು?
* ಪ್ರಜಾಪ್ರಭುತ್ವ ಕುರಿತಂತೆ ತುಂಬಾ ಶ್ರೇಷ್ಠವಾದುದು ಏನು?
* ನಾನು ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಹೇಗೆ ಆಚರಿಸಿದ್ದೇನೆ?
• ಇಂದಿನ ಪ್ರಪಂಚದಲ್ಲಿ ಭ್ರಾತೃತ್ವದ ಪ್ರಸ್ತುತತೆ ಏನು?
• ಯಾವ ಕ್ರಮಗಳು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ತಳ್ಳುತ್ತವೆ? ಹಾಗೂ ಈ ಅಪಾಯದ ವಿರುದ್ಧ ರಕ್ಷಣೆ ಪಡೆಯಲು ಜನರು ಏನು ಮಾಡಬಹುದು?

ಈ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು 40 ರಿಂದ 60 ಸೆಕೆಂಡುಗಳ ರೀಲ್ಸ್ ಸೃಷ್ಟಿಸಿ.
ನಿಮ್ಮ ಇನ್‌ಸ್ಟಾಗ್ರಾಮ್, ಎಕ್ಸ್ ಫೇಸ್ಟುಕ್ ಅಥವಾ ಯೂಟ್ಯೂಬ್ ಖಾತೆಯಲ್ಲಿ #ಕರ್ನಾಟಕ_ಪ್ರಜಾಪ್ರಭುತ್ವ ದಿನ_2024 ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ರೀಲ್ಸ್ ಪೋಸ್ಟ್ ಮಾಡಿ. ಬಳಿಕ ಲಿಂಕ್ ಅನ್ನು ಇಲ್ಲಿ ಹಂಚಿಕೊಳ್ಳಿ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...