ಖಲಿಸ್ತಾನ್ ಬೇಡಿಕೆ ಕೂಗು ಬಲವಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ನಾಯಕರೊಬ್ಬರು ದನಿಗೂಡಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜಕೀಯ ಮುಖಂಡ ಹರ್ಪ್ರೀತ್ ಸಿಂಗ್ ಬೇಡಿ, ಪ್ರತ್ಯೇಕ ‘ಖಲಿಸ್ತಾನ್’ ಬೇಡಿಕೆಗೆ ಒಲವು ತೋರುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದು, ಟ್ವಿಟರ್ನಲ್ಲಿ ಖಲಿಸ್ತಾನ್ಗೆ ಬೆಂಬಲವಾಗಿ ಹಲವಾರು ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ ಮತ್ತು ನಂತರ ಡಿಲೀಟ್ ಮಾಡಿದ್ದಾರೆ.
‘ರನ್ ವೇ 34’ ಸಿನಿಮಾದಂತೆ ಭಯಾನಕ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ
ಸಂವಿಧಾನದ ಪ್ರಕಾರ ಸಿಖ್ ಖಲಿಸ್ತಾನ್ಗಾಗಿ ಬೇಡಿಕೆ ಇಡಬಹುದು. ಬೇಡಿಕೆ ಇಡುವುದು ತಪ್ಪು ಹೇಗಾಗುತ್ತದೆ ? ಕಾಯ್ದೆಯನ್ನು ಬದಲಾಯಿಸಲು ಪ್ರಯತ್ನಿಸಿ ಇಲ್ಲದಿದ್ದರೆ ಮುಚ್ಚಿ …….”ಎಂದು ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ.
ಬೇಡಿಯು ‘ರಿಪಬ್ಲಿಕ್ ಆಫ್ ಖಲಿಸ್ತಾನ್’ ನ ಕರೆನ್ಸಿಯ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಖಲಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾದ ನಂತರ ಅವರು ತಮ್ಮ ಟ್ವಿಟರ್ ಖಾತೆಯನ್ನು ರದ್ದುಗೊಳಿಸಿದರು.