ಬೆಂಗಳೂರು: ಮಸಿದಿಯಲ್ಲಿನ ಧ್ವನಿವರ್ಧಕ ನಿಷೇಧಿಸಬೇಕು ಎಂಬ ಆಗ್ರಹಗಳು ಇದೀಗ ರಾಜ್ಯದಲ್ಲಿಯೂ ಕೇಳಿಬರುತ್ತಿದ್ದು, ಮಸೀದಿಯಲ್ಲಿನ ಧ್ವನಿವರ್ಧಕ ತೆಗೆಸುವಂತೆ ಶ್ರೀರಾಮ ಸೇನೆ ಸರ್ಕಾರಕ್ಕೆ ಆಗ್ರಹಿಸಿದೆ.
ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ಬ್ಯಾನ್ ಮಾಡುವಂತೆ ಮಹಾ ಸರ್ಕಾರಕ್ಕೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿಯೂ ಮಸೀದಿಗಳಲ್ಲಿನ ಮೈಕ್ ಬ್ಯಾನ್ ಮಾಡುವಂತೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.
Big News: ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ಮಹತ್ವದ ಸಭೆ; ಜನಪ್ರಿಯ ಯೋಜನೆಗಳ ಬಗ್ಗೆ ಅಧಿಕಾರಿಗಳ ಕಳವಳ
ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಇದರಿಂದ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೇ ಶಬ್ಧ ಮಾಲಿನ್ಯ ಕೂಡ ಆಗುತ್ತಿದೆ. ಈಗ ರಂಜಾನ್ ಸಮಯವಾದ್ದರಿಂದ ಸೈರನ್ ಬಳಸುವುದು ಕೂಡ ಸಮಸ್ಯೆಯಾಗುತ್ತಿದೆ. ಹಾಗಾಗಿ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.