ಈ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಡೆಲ್ಟಾ ರೂಪಾಂತರಿಯು ಹೆಚ್ಚು ಮಾರಕವಾಗಿದ್ದು ಚಿಕನ್ಫಾಕ್ಸ್ನಷ್ಟು ವ್ಯಾಪಕವಾಗಿ ಹರಡಬಲ್ಲದು ಎಂದು ಅಮೆರಿಕದ ಆರೋಗ್ಯದ ಪ್ರಾಧಿಕಾರ ಆಂತರಿಕ ದಾಖಲೆಯ ಮಾಹಿತಿಯನ್ನು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಾಯಿಲೆ ನಿಯಂತ್ರಣ ಹಾಗೂ ತಡೆಗಟ್ಟುವಿಕಯು ವರದಿ ಮಾಡಿಕೊಂಡಿರುವ ಇನ್ನೂ ಬಹಿರಂಗ ಮಾಡದ ದಾಖಲೆಯಲ್ಲಿ ಭಾರತದಲ್ಲಿ ಕೊರೊನಾ ಲಸಿಕೆಯನ್ನು ಪಡೆಯದವರಷ್ಟೇ ಲಸಿಕೆಯನ್ನು ಸ್ವೀಕರಿಸಿದವರೂ ಸಹ ಡೆಲ್ಟಾ ರೂಪಾಂತರಿಯನ್ನು ಹರಡಬಲ್ಲರು ಎಂದು ಉಲ್ಲೇಖಿಸಲಾಗಿದೆ.
B.1.617.2 ಡೆಲ್ಟಾ ರೂಪಾಂತರಿಗಳು ಗಂಭೀರ ಲಕ್ಷಣಗಳನ್ನು ತೋರಿಸಬಲ್ಲವು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಈ ರೂಪಾಂತರಿಯು ಎಬೋಲಾ, ನೆಗಡಿ , ಜ್ವರ, ಚಿಕನ್ ಫಾಕ್ಸ್ಗಳಿಗೆ ಕಾರಣವಾಗುವ ವೈರಸ್ಗಳಿಗಿಂತಲೂ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ.