ಭಾರತದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ದಾಂಧಲೆ ವೇಳೆ ಮಕ್ಕಳಿಗೆ ಸೋಂಕು ಅಂಟಲು ಡೆಲ್ಟಾ ರೂಪಾಂತರಿಯೇ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಅಧ್ಯಯನವೊಂದು ತಿಳಿಸಿದೆ.
ಕೊರೋನಾ ಸೋಂಕಿತರಾದ 583 ಮಕ್ಕಳ ಸ್ಯಾಂಪಲ್‌ಗಳನ್ನು ಮಾರ್ಚ್-ಜೂನ್ 2021ರ ನಡುವೆ ಜೀನೋಂ ಸೀಕ್ವೆನ್ಸಿಂಗ್ ಅಧ್ಯಯನಕ್ಕೆ ಒಳಪಡಿಸಲಾಗಿದ್ದು 0-18 ವರ್ಷ ವಯೋಮಾನದ ಮಕ್ಕಳಲ್ಲಿ ಸೋಂಕಿಗೆ ಕಾರಣವಾದ ವೈರಸ್‌ಗಳಲ್ಲಿ ಸಾಮಾನ್ಯವಾಗಿ ಕಂಡು ಬಂದಿರುವ ಮಾದರಿಗಳನ್ನು ಕಂಡುಕೊಳ್ಳಲಾಗಿದೆ.
ಕೊರೊನಾ ಸಾವುಗಳ ಕುರಿತು ಶಾಕಿಂಗ್ ಸಂಗತಿ ಬಹಿರಂಗ; ಲಸಿಕೆ ಪಡೆಯದವರೇ ಮಹಾಮಾರಿಗೆ ಅತಿಹೆಚ್ಚು ಟಾರ್ಗೆಟ್
“512 ಸೀಕ್ವೆನ್ಸ್‌ಗಳ ಪೈಕಿ, 372 ಕಾಳಜಿ ತೋರಬೇಕಾದ ಮಾದರಿಗಳಾಗಿದ್ದು, 51 ಆಸಕ್ತಿ ಮೂಡಿಸಿದ ಮಾದರಿಗಳಾಗಿವೆ. ಇವುಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬಂದ ಮಾದರಿಗಳು ಡೆಲ್ಟಾ ಆಗಿದ್ದು, ಕಪ್ಪಾ, ಆಲ್ಫಾ ಮತ್ತು ಬಿ.1.36ಗಳಲ್ಲಿ ಕ್ರಮವಾಗಿ 65.82%, 9.96%, 6.83% ಮತ್ತು 4.68% ಸಂದರ್ಭಗಳಲ್ಲಿ ಕಂಡು ಬಂದಿವೆ,” ಎಂದು ಐಸಿಎಂಆರ್ ಅಧ್ಯಯನ ತಿಳಿಸಿದೆ.