ಕೋವಿಡ್ ಮೂರನೇ ಅಲೆಯ ಭೀತಿ ಮೂಡಿಸುತ್ತಿರುವ ಡೆಲ್ಟಾ ವೈರಸ್, ದೇಶಾದ್ಯಂತ ವ್ಯಾಪಕವಾಗಿ ಹಬ್ಬತೊಡಗಿದೆ.
ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಕೋವಿಡ್ ಪ್ರಕರಣಗಳ ಜೀನೋಮ್ ಪರೀಕ್ಷೆ ಮಾಡಿದಾಗ ಇವುಗಳ ಪೈಕಿ 80%ನಷ್ಟು ಕೇಸ್‌ಗಳಲ್ಲಿ ಡೆಲ್ಟಾ ವೈರಸ್‌ಗಳೇ ಸೋಂಕಿಗೆ ಕಾರಣವಾಗಿವೆ ಎಂದು ತಿಳಿದುಬಂದಿದೆ.
‘ಮೀಮರ್’ಗಳ ಡಾರ್ಲಿಂಗ್ ಆದ ಟೀಂ ಇಂಡಿಯಾದ ಇಂಗ್ಲಿಷ್ ಅಭಿಮಾನಿ
ಕೋವಿಡ್ ಸೋಂಕಿತರ ಸ್ಯಾಂಪಲ್ ಗಳನ್ನು ಜೀನೋಮ್ ಪರೀಕ್ಷೆಗೆ ಒಳಪಡಿಸುತ್ತಿರುವ ಮಹಾರಾಷ್ಟ್ರ ಆರೋಗ್ಯ ಇಲಾಖೆ, ಇವುಗಳ ಪೈಕಿ 76 ಸೋಂಕಿತರಿಗೆ ಡೆಲ್ಟಾ ವೈರಸ್ ಅಂಟಿಕೊಂಡಿರುವುದನ್ನು ಪತ್ತೆ ಮಾಡಿದೆ. ಇವರ ಪೈಕಿ ಐವರು ಮೃತಪಟ್ಟಿದ್ದು, 71 ಮಂದಿ ಚೇತರಿಸಿಕೊಂಡಿದ್ದಾರೆ.
ಡೆಲ್ಟಾವತಾರಿ ವೈರಾಣುಗಳನ್ನು ಪತ್ತೆ ಮಾಡಲೆಂದು ಐದು ಪ್ರಯೋಗಾಲಯಗಳು ಹಾಗೂ ಐದು ಆಸ್ಪತ್ರೆಗಳನ್ನು ಮಹಾರಾಷ್ಟ್ರ ಸರ್ಕಾರ ಗುರುತಿಸಿದೆ. ಪ್ರತಿ ಕೇಂದ್ರವೂ 15ರಷ್ಟು ಸ್ಯಾಂಪಲ್‌ಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಜೀನೋಂ ಪರೀಕ್ಷೆಗೆಂದು ಕಳುಹಿಸುತ್ತದೆ.