ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕರಾದ, ಟಾಟಾ ಮೋಟಾರ್ಸ್, ಇಂದು ಒಡಿಶಾ ಸರ್ಕಾರಕ್ಕೆ 181 ವಿಂಗರ್ ವೆಟರ್ನರಿ ವ್ಯಾನ್ ಗಳನ್ನು ವಿತರಿಸುವ ಬಗ್ಗೆ ಘೋಷಿಸಿದೆ. ವಾಹನಗಳನ್ನು ಒಡಿಶಾ ಸರ್ಕಾರ ಹಾಗೂ ಟಾಟಾ ಮೋಟಾರ್ಸ್ ನಿಂದ ವಿಶೇಷ ಅತಿಥಿಗಳೊಂದಿಗೆ ಒಡಿಶಾ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ನವೀನ್ ಪಾಟ್ನಾಯಕ್ ಹಸಿರು ಬಾವುಟ ತೋರಿಸುವ ಮೂಲಕ ಉದ್ಘಾಟಿಸಿದ್ದಾರೆ.
ವಿಶೇಷವಾಗಿ ವ್ಯವಸ್ಥಿತಗೊಳಿಸಲಾಗಿರುವ ಟಾಟಾ ವಿಂಗರ್ ಅನ್ನು ಒಡಿಶಾ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಪಶುವೈದ್ಯಕೀಯ ವ್ಯಾನ್ ಗಳಾಗಿ ಬಳಸಬಹುದಾಗಿದೆ.
ಟಾಟಾ ಮೋಟಾರ್ಸ್ ಸರ್ಕಾರದ ಸಮಿತಿಯ ನಿಯಮ ಮತ್ತು ಷರತ್ತುಗಳಿಗೆ ಅನುಗುಣವಾಗಿ ಪ್ರಮುಖ ಹರಾಜುದಾರನಾಗಿ ಹೊಮ್ಮಿದ್ದು, ವರ್ಗದಲ್ಲೇ ಅತ್ಯುತ್ತಮವಾದ ವಿಶೇಷತೆಗಳಿಂದ ಸುಸಜ್ಜಿತವಾದ ಸಂಪೂರ್ಣ ನಿರ್ಮಾಣಗೊಂಡಿರುವ ವಿಂಗರ್ ವೆಟರ್ನರಿ ವ್ಯಾನ್ ಗಳನ್ನು ವಿತರಿಸಿದೆ. ಇ-ಹರಾಜು ಪ್ರಕ್ರಿಯೆಯನ್ನು ಸರ್ಕಾರದ ಇ-ಮಾರ್ಕೆಟ್ ಪ್ಲೇಸ್ ಮೂಲಕ ನಡೆಸಲಾಯಿತು.
ಟಾಟಾ ವಿಂಗರ್ 2.2 ಲೀಟರ್ ಡೈಕೊರ್ ಇಂಜಿನ್ ನಿಂದ ಬೆಂಬಲಿಸಲ್ಪಟ್ಟಿದ್ದು, ಇದು ಸುಧಾರಿತ ಟಾರ್ಕ್ ಹಾಗೂ ಉತ್ತಮ ಇಂಧನ ಕ್ಷಮತೆ ಹೊಂದಿದೆ. ಇದು ಇಂಧನ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುವ ಇಕೋ ಸ್ವಿಚ್ ಮತ್ತು ಗೇರ್ ಶಿಫ್ಟ್ ಅಡ್ವೈಸರ್ ಸಹ ನೀಡುತ್ತದೆ. ವಿಂಗರ್ ನ ವರ್ಗದಲ್ಲೇ ಅತ್ಯುತ್ತಮವಾದ 25.8% ದರ್ಜೆಯ ಸಾಮರ್ಥ್ಯ ಕಡಿದಾದ ಇಳಿಜಾರು ಮತ್ತು ಫ್ಲೈ ಓವರ್ ಗಳಲ್ಲಿ ಸುಲಭವಾಗಿ ಚಾಲನೆ ಮಾಡಲು ನೆರವಾಗುತ್ತದೆ. ಇದರೊಂದಿಗೆ, ವಿಂಗರ್ ನ ಸ್ವತಂತ್ರ ಫ್ರಂಟ್ ಸಸ್ಪೆನ್ಷನ್ ಆ್ಯಂಟಿ ರೋಲ್ ಬಾರ್ ಗಳು ಹಾಗೂ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಸುಗಮ ಪ್ರಯಾಣದ ಭರವಸೆ ನೀಡುತ್ತದೆ, ಇದರೊಂದಿಗೆ ಇದರ ಮಾನೋಕಾಕ್ ಬಾಡಿ ವಿನ್ಯಾಸ ಕಾರಿನಂತಹ ಡ್ರೈವಿಂಗ್ ಡೈನಮಿಕ್ಸ್ ಮತ್ತು ಕಡಿಮೆ ಶಬ್ದ ಮಟ್ಟ, ಕಡಿಮೆ ಕಂಪನ ಹಾಗೂ ಕಡಿಮೆ ಕಠಿಣತೆ (ಎನ್ ವಿ ಹೆಚ್) ನೀಡುತ್ತದೆ.