alex Certify ದಿನಸಿ ವಿತರಿಸಲು ಮನೆಗೆ ಬಂದವನಿಂದ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಸಿ ವಿತರಿಸಲು ಮನೆಗೆ ಬಂದವನಿಂದ ಅತ್ಯಾಚಾರ

ನವದೆಹಲಿ: ಆನ್ಲೈನ್ ಮೂಲಕ ಆರ್ಡರ್ ಮಾಡಿದ ದಿನಸಿ ಸಾಮಗ್ರಿಯನ್ನು ವಿತರಿಸಲು ಅಪಾರ್ಟ್ಮೆಂಟ್ ಗೆ ಬಂದ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಆರೋಪಿ ಸುಮಿತ್ ಸಿಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಆಪ್ ಮೂಲಕ ಕೆಲವು ಅಗತ್ಯ ಸಾಮಗ್ರಿಗಳನ್ನು 23 ವರ್ಷದ ಮಹಿಳೆ ಆರ್ಡರ್ ಮಾಡಿದ್ದರು. ಆಕೆ ವಾಸವಾಗಿದ್ದ ಅಪಾರ್ಟ್ಮೆಂಟ್ ಗೆ ಬಂದ ವ್ಯಕ್ತಿ ಮಹಿಳೆ ಮನೆಯಲ್ಲಿ ಒಬ್ಬರೇ ಇರುವುದನ್ನು ಕಂಡು ಅತ್ಯಾಚಾರ ಆಗಿದ್ದಾನೆ.

ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...