ಮುಂಬೈ ಸಮೀಪದ ಸರೋವರದಲ್ಲಿ ಆಮೆಗಳ ಸಾವಿಗೆ ಉದ್ದೇಶಪೂರ್ವಕ ವಿಷವೇ ಕಾರಣ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.
ಮುಂಬೈನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಕಲ್ಯಾಣ್ ನಲ್ಲಿ ನೀರಿನ ಕೊಳದ ಸುತ್ತಲೂ ದುರ್ವಾಸನೆ ಬೀರುತ್ತಿರುವುದನ್ನು ತನಿಖೆ ಮಾಡಲು ಸ್ಥಳೀಯ ರಾಜಕಾರಣಿಯೊಬ್ಬರು ಕೇಳಿಕೊಂಡ ನಂತರ ಸಂರಕ್ಷಣಾ ಕಾರ್ಯಕರ್ತರು ಘಟನೆಯ ಬಗ್ಗೆ ಪರಿಶೀಲಿಸಿದ್ದಾರೆ.
ವೈಲ್ಡ್ ಅನಿಮಲ್ ಅಂಡ್ ರೆಪ್ಟೈಲ್ ರೆಸ್ಕ್ಯೂ ಕನ್ಸರ್ವೇಶನ್ ಗ್ರೂಪ್ ನ ಸುಹಾಸ್ ಪವಾರ್ ಅವರು, 57 ಭಾರತೀಯ ಫ್ಲಾಪ್ ಶೆಲ್ ಆಮೆಗಳನ್ನು ಕೊಲ್ಲಲಾಗಿದೆ. ಆರು ಆಮೆ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಸರೋವರದಲ್ಲಿ ಅಕ್ರಮವಾಗಿ ಸಾಕುತ್ತಿರುವ ಮೀನುಗಳನ್ನು ತಿನ್ನುವುದನ್ನು ತಡೆಯಲು ಸ್ಥಳೀಯ ನಿವಾಸಿಗಳು ಸರೀಸೃಪಗಳನ್ನು ಕೊಲ್ಲಲು ಮುಂದಾಗಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲವನ್ನೂ ಈಗ ತನಿಖೆ ಮಾಡಲಾಗುತ್ತಿದೆ, ಮರಣೋತ್ತರ ಪರೀಕ್ಷೆ ಮತ್ತು ವೈಜ್ಞಾನಿಕ ವಿಶ್ಲೇಷಣೆಯು ಈ ಸಾವುಗಳಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸುತ್ತದೆ ಎಂದು ಪವಾರ್ ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ -19 ನಿರ್ಬಂಧಗಳು ಸ್ಥಳೀಯ ಆಮೆಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಮಾನವ ಚಟುವಟಿಕೆಯ ಮೇಲಿನ ನಿರ್ಬಂಧಗಳು ಸರೋವರದಲ್ಲಿ ಮೀನಿನ ಸ್ಟಾಕ್ ಅನ್ನು ಹೆಚ್ಚಿಸಬಹುದು ಮತ್ತು ಈ ಆಮೆಗಳು ಈಗ ಅವುಗಳನ್ನು ತಿನ್ನುವ ಮೂಲಕ ಸಂಖ್ಯೆಯಲ್ಲಿ ಬೆಳೆಯುತ್ತಿವೆ, ಇದು ಕೆಲವು ಸ್ಥಳೀಯರನ್ನು ಕೆರಳಿಸಿದೆ ಎಂದು ಪವಾರ್ ಹೇಳಿದ್ದಾರೆ.
ಭಾರತೀಯ ಫ್ಲಾಪ್ ಶೆಲ್ ಆಮೆಗಳು ವಿಶೇಷವಾಗಿ ಅಪರೂಪವಲ್ಲ, ಆದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಸಂರಕ್ಷಿತ ಜಾತಿಗೆ ಸೇರಿವೆ.