
ವರ್ಷದ ಈ ಅವಧಿಯಲ್ಲಿ ನಸುಗೆಂಪು ಬಣ್ಣದ ಹೂವುಗಳು ಅರಳುವ ಮೂಲಕ ಯಾವುದೇ ನಗರದ ಸೌಂದರ್ಯವನ್ನು ನೋಡುವುದೇ ಒಂದು ಚಂದ. ದೆಹಲಿಯಲ್ಲಿ ಈಗ ಬೋಗನ್‌ವಿಲ್ಲಾದ ಋತು ಚಾಲ್ತಿಯಲ್ಲಿದೆ.
ಬೆಂಗಳೂರಿನಲ್ಲಿ ಟಬೇಬುವಾ ಅವೆಲ್ಲಾನಡಾ ಎಂಬ ಹೆಸರಿನ ಪಿಂಕ್ ಬಣ್ಣದ ಹೂವುಗಳು ಎಲ್ಲೆಡೆ ಅರಳುವ ಮೂಲಕ ನಗರವಾಸಿಗಳೆಲ್ಲಾ ಈ ಚಿತ್ರಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದನ್ನು ಗೊತ್ತಿರುವ ಸಂಗತಿ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸಹ ಪಿಂಕ್ ಬಣ್ಣದ ಈ ಹೂವುಗಳು ನಗರದಲ್ಲೆಲ್ಲಾ ಅರಳಿ, ರಸ್ತೆಗಳನ್ನೆಲ್ಲಾ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿರುವ ಚಿತ್ರಗಳು ಹಾಗೂ ವಿಡಿಯೋಗಳನ್ನು ದೆಹಲಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಸುಂದರ ಪುಷ್ಪಗಳು ವಸಂತ ಮಾಸವನ್ನು ಸ್ವಾಗತಿಸಲು ಪ್ರಕೃತಿಯೇ ಸಜ್ಜಾಗಿರುವಂತೆ ಕಾಣುವಂತೆ ಮಾಡಿವೆ.