alex Certify ಮಾಡೆಲ್ ಗೆ ಹೇರ್ ಕಟ್ ಮಾಡಿದ್ದೇ ತಪ್ಪಾಯ್ತು..! ಸಲೂನ್ ಗೆ 2 ಕೋಟಿ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್ ಗೆ ಹೇರ್ ಕಟ್ ಮಾಡಿದ್ದೇ ತಪ್ಪಾಯ್ತು..! ಸಲೂನ್ ಗೆ 2 ಕೋಟಿ ರೂ. ದಂಡ

ದೆಹಲಿಯಲ್ಲಿ ತಪ್ಪಾಗಿ ಹೇರ್ ಕಟ್ ಮಾಡಿದ್ದು ಸಲೂನ್ ಒಂದಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಮಾಡೆಲ್ ಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸಲೂನ್ ಗೆ ಸೂಚನೆ ನೀಡಿದೆ.

2018ರಲ್ಲಿ ಆಶ್ಯನ್ ರಾಯ್, ದೆಹಲಿ ಹೊಟೇಲ್ ಒಂದರಲ್ಲಿರುವ ಸಲೂನ್ ಗೆ ಹೋಗಿದ್ದರು. ಅಲ್ಲಿ ಕೂದಲನ್ನು ಕಟ್ ಮಾಡಿಸಿದ್ದಾರೆ. ಆಶ್ಯನ್ ರಾಯ್, ಅನೇಕ ಹೇರ್ ಉತ್ಪನ್ನಗಳ ಮಾಡಲಿಂಗ್ ಮಾಡಿದ್ದರು. ಆದ್ರೆ ಸಲೂನ್ ನಲ್ಲಿ ತಪ್ಪಾಗಿ ಹೇರ್ ಕಟ್ ಮಾಡಿದ್ದರಿಂದ ಆಶ್ಯನ್ ಕೆಲಸ ಕೈತಪ್ಪಿ ಹೋಗಿತ್ತು. ಈ ಬಗ್ಗೆ ಮಾಲೀಕರಿಗೆ ಹೇಳಿದ್ರೆ, ಮಾಲೀಕರು ಯಾವುದೇ ಹಣ ತೆಗೆದುಕೊಳ್ಳದೆ ಅವರನ್ನು ಕಳುಹಿಸಿದ್ದರು.

ಆಶ್ಯನ್, ಸಲೂನ್ ನಲ್ಲಿ ಕೆಲ ಕೂದಲಿನ ಆರೈಕೆ ಉತ್ಪನ್ನಗಳನ್ನು ಖರೀದಿಸಿದ್ದರಂತೆ. ಹಾಗೆ ಸಲೂನ್ ನಲ್ಲಿ ಕೆಲ ಉತ್ಪನ್ನಗಳನ್ನು ಬಳಸಲಾಗಿತ್ತಂತೆ. ಇದಕ್ಕೆ ಹಾಕಿದ್ದ ರಾಸಾಯನಿಕದಿಂದಾಗಿ ಕೂದಲು ಹಾಳಾಗಿತ್ತಂತೆ. ಕೂದಲು ಉದುರಿ, ಅನೇಕ ಸಮಸ್ಯೆ ಎದುರಾಗಿತ್ತಂತೆ.

ಆಶ್ಯನ್, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಪರಿಹಾರ ನೀಡುವಂತೆ ಆಶ್ಯನ್ ಬೇಡಿಕೆಯಿಟ್ಟಿದ್ದರಂತೆ. ಪ್ರಕರಣದ ವಿಚಾರಣೆ ನಡೆಸಿದ ಆಯೋಗ, 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಸಲೂನ್ ಗೆ ಸೂಚನೆ ನೀಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...