ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಸಿಲು ಧಗಧಗಿಸುತ್ತಿದೆ. ಇದರ ನಡುವೆ ಮಹಾತಾಯಿಯೊಬ್ಬಳು ಹೋಂ ವರ್ಕ್ ಮಾಡದ ತನ್ನ ಪುತ್ರಿಯನ್ನು ಟೆರೇಸ್ ಮೇಲೆ ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂಥದೊಂದು ಆಘಾತಕಾರಿ ಘಟನೆ ತುಕ್ಮಿಪುರ್ ನ ಖಜೂರಿ ಖಾಸ್ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ವಿಡಿಯೋದಲ್ಲಿ ಬಾಲಕಿಯ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದು, ಬಿರುಬಿಸಿಲಿನಿಂದ ತಪ್ಪಿಸಿಕೊಳ್ಳಲು ಆಕೆ ಒದ್ದಾಡುತ್ತಿರುವುದು ಕಾಣಬಹುದಾಗಿದೆ. ವಿಚಾರಣೆ ವೇಳೆ ಬಾಲಕಿಯ ತಾಯಿ ತಾನು ಐದಾರು ನಿಮಿಷ ಅಷ್ಟೇ ಆಕೆಯನ್ನು ನಿಲ್ಲಿಸಿದ್ದೆ ಎಂದು ಹೇಳಿದ್ದಾರೆ.