2016ರಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರಿಗೆ ದೆಹಲಿ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಬಾಲಕಿಯ ಖಾಸಗಿ ಅಂಗವನ್ನು ಕಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ ಮಹಿಳೆಗೆ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕುಮಾರ್ ರಜತ್ ಈ ಕೃತ್ಯವು “ಸಂತ್ರಸ್ತ ಬಾಲಕಿ ಮತ್ತು ಆಕೆಯ ಪೋಷಕರಿಗೆ ಅಪಾರ ಮಾನಸಿಕ ಆಘಾತವನ್ನು ಉಂಟುಮಾಡಿದೆ” ಎಂದು ಹೇಳಿದರು. ಆರೋಪಿತ ಮಹಿಳೆಗೆ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಜೊತೆಗೆ 16,000 ರೂ. ದಂಡ ವಿಧಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 6 (ಲೈಂಗಿಕ ದೌರ್ಜನ್ಯ) ಮತ್ತು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354 (ಕ್ರೋಧದ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಅಪರಾಧಗಳು) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿ ಶಶಿ ಎಂಬುವವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.
ಅಪರಾಧದ ಸ್ವರೂಪ ಮತ್ತು ಅಪರಾಧಿಯು ಬಡವರಾಗಿದ್ದು ಕುಟುಂಬದ ಏಕೈಕ ಆಧಾರವಾಗಿರುವವರು ಮತ್ತು ಆಸ್ತಿಯನ್ನು ಹೊಂದಿರದಂತಹ ಸಂದರ್ಭಗಳನ್ನು ಗಮನಿಸಿಯೂ ಅಪರಾಧಿಗೆ ಸೆಕ್ಷನ್ 6 ರ ಅಡಿಯಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಪೋಕ್ಸೋ ಕಾಯ್ದೆ ಐಸಿಪಿ ಸೆಕ್ಷನ್ ಕಾಯಿದೆಗಳಿಗಿಂತ ಕಠಿಣವಾಗಿದೆ.
ಶಿಕ್ಷೆಯನ್ನು ವಿಧಿಸಲು ಯಾವುದೇ ನಿರ್ದಿಷ್ಟ ಸೂತ್ರವಿಲ್ಲ. ಪ್ರತಿ ಪ್ರಕರಣದಲ್ಲಿನ ಸತ್ಯಗಳು ಮತ್ತು ಸಂದರ್ಭಗಳು, ಅಪರಾಧದ ಸ್ವರೂಪ, ಕೃತ್ಯದ ಯೋಜನೆ , ಅದರ ಉದ್ದೇಶ, ಅಪರಾಧಿಯ ನಡವಳಿಕೆ ಮತ್ತು ಎಲ್ಲದರ ಮೇಲೆ ನಿರ್ಧಾರಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಪರಾಧಿಗೆ ಶಿಕ್ಷೆಯಾಗದೇ ಹೋಗಬಾರದು, ಸಂತ್ರಸ್ತೆ ಮತ್ತು ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕು ಎಂಬುದು ಶಿಕ್ಷೆಯ ಮೂಲ ಉದ್ದೇಶವಾಗಿದೆ ನ್ಯಾಯಾಲಯ ಹೇಳಿದೆ.