ದೆಹಲಿಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಹೇಯ ಘಟನೆಯೊಂದು ನಡೆದಿದೆ. ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಭಾನುವಾರ ದಂಪತಿಗೆ ಮನೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಗೆ ಆಕೆಯ ಮಾಲೀಕರು ಥಳಿಸಿದ್ದಾರೆ.
ಪೊಲೀಸರು ಹೇಳುವಂತೆ ಪಶ್ಚಿಮ ಬಂಗಾಳ ಮೂಲದ ಮಹಿಳೆಯನ್ನು ದಂಪತಿಗಳು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅವಳ ಕೂದಲನ್ನು ಸಹ ಕತ್ತರಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂತ್ರಸ್ತೆ ರಜಿನಿಗೆ ತಿಂಗಳಿಗೆ 7,000 ರೂ. ನೀಡಲಾಗುತ್ತಿತ್ತು.
ಶೀನಾ ಬೋರಾ ಹತ್ಯೆ ಪ್ರಕರಣ: ಆರೋಪಿ ತಾಯಿ ಇಂದ್ರಾಣಿ ಮುಖರ್ಜಿಗೆ ಬಿಡುಗಡೆ ಭಾಗ್ಯ
ರಜನಿ ಅಸ್ವಸ್ಥರಾಗಿದ್ದು ಮನೆಗೆ ಕರೆದುಕೊಂಡು ಹೋಗಬೇಕೆಂದು ಪ್ಲೇಸ್‌ಮೆಂಟ್ ಏಜೆನ್ಸಿಗೆ ಆಕೆ ಕೆಲಸ ಮಾಡುತ್ತಿದ್ದ ಮನೆಯವರಿಂದ ಕರೆ ಬಂದಿತ್ತು. ಬಳಿಕ ಆಕೆಯನ್ನು ತನ್ನ ಕಚೇರಿಯಲ್ಲಿ ಡ್ರಾಪ್ ಮಾಡಿ ಹೊರಟು ಹೋದರು ಎಂದು ಏಜೆನ್ಸಿಯ ಮಾಲೀಕರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಅಸ್ವಸ್ಥಳಾಗಿದ್ದು, ಮೂತ್ರಕೂಡ ಮಾಡಿಕೊಂಡಿದ್ದಳು. ಓಡಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಳು. ಜೊತೆಗೆ ತನಗೆ ನಿತ್ಯ ಥಳಿಸುವುದು, ದೇಹದಾದ್ಯಂತ ಗಾಯಗಳಾಗಿರುವುದು ಸಹ ಗಮನಕ್ಕೆ ಬಂದಿದೆ.
ವೈದ್ಯಕೀಯ ವರದಿಯಲ್ಲಿ ಆಕೆಗೆ ದೈಹಿಕ ಹಲ್ಲೆಯಾಗಿದ್ದು, ತಲೆಗೆ ಪೆಟ್ಟು ಬಿದ್ದಿತ್ತು. ವಾಂತಿ ಕೂಡ ಆಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಕಣ್ಣು, ಮುಖ, ಕೈಕಾಲು ಮತ್ತು ಹೊಟ್ಟೆಯ ಮೇಲೂ ಗಾಯಗಳಾಗಿದ್ದವು.