ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ‘ಸ್ವಚ್ಛ ಭಾರತ’ ಯೋಜನೆ ದೇಶದಾದ್ಯಂತ ಜಾರಿಗೆ ಬಂದಿದೆ. ಸ್ವಚ್ಛತೆಯ ಮಹತ್ವವನ್ನು ಮೋದಿಯವರು ದೇಶದ ಜನತೆಗೆ ಪದೇ ಪದೇ ಹೇಳುತ್ತಲೇ ಇರುತ್ತಾರೆ.
ಈ ಹಿಂದೆ ಬೀಚ್ನಲ್ಲಿ ವಾಕ್ ಮಾಡುತ್ತಿದ್ದ ವೇಳೆ ನರೇಂದ್ರ ಮೋದಿಯವರು ಅಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಮತ್ತೊಮ್ಮೆ ಅದೇ ಕಾರ್ಯ ಮಾಡಿ ದೇಶವಾಸಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಭಾನುವಾರದಂದು ನವದೆಹಲಿಯ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಹಾಗೂ 5 ಅಂಡರ್ ಪಾಸ್ ಗಳನ್ನು ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು.
ಆ ಬಳಿಕ ಸುರಂಗದ ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರಿಗೆ ಅಲ್ಲಿ ಬಿದ್ದಿದ್ದ ಕಸ ಹಾಗೂ ಬಳಸಿ ಬಿಸಾಡಿದ ನೀರಿನ ಬಾಟಲ್ ಕಂಡುಬಂದಿದೆ. ಕೂಡಲೇ ಅದನ್ನು ತೆಗೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.