alex Certify ಕುಲ್ಹಾದ್ ಪಿಜ್ಜಾ ಆಯ್ತು ಇದೀಗ ಮೊಮೊಸ್‌ ಸರದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಲ್ಹಾದ್ ಪಿಜ್ಜಾ ಆಯ್ತು ಇದೀಗ ಮೊಮೊಸ್‌ ಸರದಿ..!

Video Of Street Vendor Selling Bizarre Kulhad Momos Has The Internet  Confused - the vieದೆಹಲಿ: ಕುಲ್ಹಾದ್ ಪಿಜ್ಜಾ ನಂತರ, ಇದೀಗ ಕುಲ್ಹಾದ್-ಬೇಯಿಸಿದ ಮೊಮೊಸ್‌ನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ಬ್ಲಾಗರ್ ಹಾರ್ದಿಕ್ ಮಲಿಕ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಾರಾಟಗಾರನು ತಾಜಾ ಹುರಿದ ಮೊಮೊಗಳನ್ನು ತೆಗೆದುಕೊಂಡು ಅವುಗಳನ್ನು ಮೇಯನೇಸ್, ಎರಡು ಸಾಸ್‌ಗಳು ಮತ್ತು ಮಸಾಲೆಗಳ ಸಾಸ್‌ನಲ್ಲಿ ಮಿಕ್ಸ್ ಮಾಡಿದ್ದಾರೆ. ಕೇವಲ ಸಾಸ್ ಮಾತ್ರವಲ್ಲದೆ, ಅದಕ್ಕೆ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಅನ್ನು ಮಿಕ್ಸ್ ಮಾಡಿದ್ದಾರೆ.

ನಂತರ ಅವರು ಮಣ್ಣಿನ ಗಾಜಿಗೆ ಮಿಕ್ಸ್ ಮಾಡಿಟ್ಟ ಎರಡು ಮೊಮೊಗಳನ್ನು ತುಂಬುತ್ತಾರೆ. ನಂತರ ಅದನ್ನು ಮಸಾಲೆಗಳೊಂದಿಗೆ ಅಲಂಕರಿಸುವುದರೊಂದಿಗೆ ಓವೆನ್ ನಲ್ಲಿ ಇಟ್ಟು ಬಿಸಿ ಮಾಡುತ್ತಾರೆ. ಪೂರ್ವ ದೆಹಲಿಯ ಕೃಷ್ಣಾ ನಗರದಲ್ಲಿ ಈ ವಿಶಿಷ್ಟ ಖಾದ್ಯ ಲಭ್ಯವಿದೆ. ಸುಮಾರು 2.5 ಮಿಲಿಯನ್ ವೀಕ್ಷಣೆಗಳೊಂದಿಗೆ ವಿಡಿಯೋ ವೈರಲ್ ಆಗಿದೆ. ವಿಶಿಷ್ಟ ಶೈಲಿಯ ಮೊಮೋಸ್ ತಯಾರಿಸಿದ ವಿಡಿಯೋ ನೋಡಿದ ನೆಟ್ಟಿಗರ ಬಾಯಲ್ಲಿ ನೀರೂರಿದೆ.

ಈ ವರ್ಷದ ಆರಂಭದಲ್ಲಿ, ಸೂರತ್ ಮೂಲದ ಮಾರಾಟಗಾರರೊಬ್ಬರು ತಮ್ಮ ಕುಲ್ಹಾದ್ ಪಿಜ್ಜಾ ತಯಾರಿಸುವ ಮುಖಾಂತರ ಪ್ರಸಿದ್ಧಿ ಪಡೆದಿದ್ದರು. ಮುಂದೆ ಕುಲ್ಹಾದ್ ಟ್ವಿಸ್ಟ್ ಇನ್ನೇನಾಗುತ್ತದೋ ಎಂದು ಹಲವರು ಆಶ್ಚರ್ಯಪಟ್ಟಿದ್ರೆ, ಇನ್ನೂ ಕೆಲವರು ಬಿರಿಯಾನಿಗೆ ಇದೇ ರೀತಿಯ ಟ್ವಿಸ್ಟ್ ಸಿಗುತ್ತದೆಯೇ ಎಂದು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...