ಟಾಟಾ ಕಂಪನಿಯು 15 ಲಕ್ಷದೊಳಗೆ ಎರಡು ಪ್ರತ್ಯೇಕ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ನೀಡಿದೆ. ಸರಾಸರಿ 300 ಕಿಮೀ ಆಲ್-ಎಲೆಕ್ಟ್ರಿಕ್ ಶ್ರೇಣಿಯೊಂದಿಗೆ ಮಾರುಕಟ್ಟೆಯಲ್ಲಿದೆ. ಇದನ್ನು ಇತ್ತೀಚೆಗೆ 11.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಟಾಪ್-ಸ್ಪೆಕ್ ಮಾಡೆಲ್‌ನ ಬೆಲೆ 12.99 ಲಕ್ಷ ರೂ. ಆಗಿದೆ.
ಸುಮಾರು 8.5 ಗಂಟೆಗಳಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಫಾಸ್ಟ್ ಚಾರ್ಜರ್ ಬಳಸಿ ಸುಮಾರು 60 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇಕಡಾ 80 ಚಾರ್ಜ್ ಗೊಳಿಸಬಹುದು.
ಟಾಟಾ ನೆಕ್ಸನ್ ಇವಿ:
ಟಾಟಾ ನೆಕ್ಸಾನ್ ಇವಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಸ್ ಯು ವಿ ಆಗಿದೆ. ಇದು ಒಂದೇ ಚಾರ್ಜ್‌ನಲ್ಲಿ 312 ಕಿಮೀ ಪ್ರಯಾಣಿಸಬಹುದು.
ಎಂಟೂವರೆ ತಾಸಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಅರವತ್ತು ನಿಮಿಷದಲ್ಲಿ ಫಾಸ್ಟ್ ಚಾರ್ಜ್ ಮೂಲಕ ಶೇ.80 ರಷ್ಟು ಚಾರ್ಜ್ ಮಾಡಬಹುದಾಗಿದೆ. 13.99 ಲಕ್ಷ ರೂ.ನಿಂದ 16.85 ಲಕ್ಷ ರೂ.ವರೆಗೆ ಲಭ್ಯವಿದೆ.
ಎಂಜಿ ಜೆಡ್ಎಸ್
ಜಡ್ ಎಸ್ ಇವಿ, ಎಂಜಿ ಕಂಪನಿಯ ಎರಡನೇ ಉತ್ಪನ್ನವಾಗಿದೆ. ಇದು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಗರಿಷ್ಟ 340 ಕಿಮೀ ಸಂಚರಿಸಲಿದೆ. ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ತಲುಪುತ್ತದೆ. ಫಾಸ್ಟ್ ಚಾರ್ಜರ್ ಮೂಲಕ 50 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದು. ಸಾಮಾನ್ಯ ಚಾರ್ಜರ್‌ನಲ್ಲಿ 6ರಿಂದ 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.
ಹುಂಡೈ ಕೋನಾ ಎಲೆಕ್ಟ್ರಿಕ್
ಕೋನಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಮೊದಲ ಎಲೆಕ್ಟ್ರಿಕ್ ಎಸ್ ಯು ವಿ ಆಗಿದೆ. ಇದು 452 ಕಿಮೀ ಪೂರ್ಣ ಚಾರ್ಜ್ ಗೆ ಮೈಲೇಜ್ ನೀಡುತ್ತದೆ.
ಆಡಿ ಇ ಟ್ರಾನ್
ಜರ್ಮನಿಯ ಆಡಿ, ಇ ಟ್ರಾನ್ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಡಿ ಇ-ಟ್ರಾನ್ 4.1 ಸೆಕೆಂಡುಗಳಲ್ಲಿ 0 – 100ಕಿಮೀ ವೇಗವನ್ನು ಪಡೆಯುತ್ತದೆ, ಹಾಗೆಯೇ ಪ್ರತಿ ಪೂರ್ಣ ಚಾರ್ಜ್ 401 – 481 ಕಿಮೀ ಮತ್ತು ಆರ್ ಎಸ್ 388 – 500 ಕಿಮೀ ಮೈಲೇಜ್ ನೀಡುತ್ತದೆ.
ಮರ್ಸಿಡೀಸ್ ಬೆನ್ಜ್ ಇಕ್ಯೂಸಿ
ಇದು ಭಾರತದಲ್ಲಿ ಬಿಡುಗಡೆಯಾದ ಮೊದಲ ಆಲ್-ಎಲೆಕ್ಟ್ರಿಕ್ ಐಷಾರಾಮಿ ಎಸ್ ಯುವಿ ಆಗಿದೆ. ಇದರ ಬೆಲೆ 1 ಕೋಟಿಗೂ ಅಧಿಕ.
ಜಾಗ್ವಾರ್ ಐ-ಪೇಸ್
ಜಾಗ್ವಾರ್ ಐ-ಪೇಸ್ ಪಟ್ಟಿಯಲ್ಲಿ ಅತ್ಯಂತ ಸುಂದರ ಎಲೆಕ್ಟ್ರಿಕ್ ಎಸ್ ಯುವಿ ಆಗಿದೆ. ಬೆಲೆ 1.06 ಕೋಟಿ ರೂ.ನಿಂದ ಪ್ರಾರಂಭವಾಗುತ್ತವೆ.