
ದೆಹಲಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕಾರ್ಪಿಯೋ ಚಾಲಕನ ಜತೆಗೆ ಬೈಕರ್ ಒಬ್ಬ ಯಾವುದೋ ಕಾರಣಕ್ಕೆ ವಾಗ್ವಾದ ನಡೆಸಿದ. ಇದು ವಾಹನ ಚಲಾಯಿಸುತ್ತಲೇ ಆಗಿರುವ ಘಟನೆಯಾಗಿದ್ದು, ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಬೈಕರ್ ರಸ್ತೆ ಮೇಲೆ ಬಿದ್ದಿದ್ದ !
ಇನ್ನೊಬ್ಬ ಬೈಕ್ ಚಾಲಕ ಧರಿಸಿದ್ದ ಹೆಲ್ಮೆಟ್ ಕ್ಯಾಮೆರಾದಲ್ಲಿ ಇದು ರೆಕಾರ್ಡ್ ಆಗಿದ್ದು, ಮಾತುಗಳು ಕೂಡ ಅಸ್ಪಷ್ಟವಾಗಿವೆ. ಈ ವಿಡಿಯೋದಲ್ಲಿರುವ ದೃಶ್ಯದ ಪ್ರಕಾರ, ಬೈಕ್ ರೈಡ್ ಮಾಡುತ್ತಲೇ ಸವಾರ, ಸ್ಕಾರ್ಪಿಯೋ ಚಾಲಕನ ಜತೆ ಮಾತಿನ ಚಕಮಕಿಯಲ್ಲಿ ತೊಡಗಿದ್ದು ಕಂಡುಬಂತು. ಬಳಿಕ ಆ ಸವಾರ ಮುಂದೆ ಹೋಗಿದ್ದ. ಸ್ಕಾರ್ಪಿಯೋ ಹಿಂದೆ ಬಿದ್ದಿತ್ತು.
BIG NEWS: ಪತ್ನಿಯನ್ನು ಮನೆಯೊಳಗೆ ಗುಂಡಿಟ್ಟು ಕೊಂದ ಕಾಂಗ್ರೆಸ್ ನಾಯಕ
ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ವೇಗವಾಗಿ ಮುನ್ನುಗ್ಗಿದ ಸ್ಕಾರ್ಪಿಯೋ, ಹಿಟ್ ಆಂಡ್ ರನ್ ಮಾದರಿಯಲ್ಲಿ ಬೈಕರ್‌ಗೆ ಢೀ ಕೊಟ್ಟು ಮುಂದೆ ಹೋಯಿತು. ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದ್ದ, ಬೈಕ್ ಎಗರಿ ಮಧ್ಯಭಾಗದಲ್ಲಿ ತಡೆಗೋಡೆಗೆ ಬಡಿದಿದೆ.
ಈ ಘಟನೆ ದೆಹಲಿಯ ಅರ್ಜನ್‌ಗಢ ಮೆಟ್ರೋ ಸ್ಟೇಶನ್ ಸಮೀಪ ಭಾನುವಾರ ನಡೆದಿತ್ತು. ಬೈಕರ್‌ಗಳ ಗ್ರೂಪ್‌ನಲ್ಲಿದ್ದ ಅನುರಾಗ್ ಆರ್ ಅಯ್ಯರ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸ್ಕಾರ್ಪಿಯೋ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಸಿಎಂ, ಪಿಎಂಒ ಮತ್ತು ದೆಹಲಿ ಡಿಸಿಪಿಯನ್ನು ಆಗ್ರಹಿಸಿದ್ದಾರೆ.