
ಮೋತಿ ನಗರ ಪ್ರದೇಶದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದನೆಂದು ಆರೋಪಿಸಿ ವ್ಯಕ್ತಿಯೊಬ್ಬನಿಗೆ ಆಕ್ರಮಣಕಾರಿಯಾಗಿ ಥಳಿಸಿ ಕಪಾಳಮೋಕ್ಷ ಮಾಡಿದ್ದಾನೆ. ಈ ವೀಡಿಯೊ ವೈರಲ್ ಆಗಿದ್ದು ಇಂಟರ್ನೆಟ್ ಬಳಕೆದಾರರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿದ್ಯಾರ್ಥಿಯು ಕಳ್ಳನೆಂದು ಆರೋಪಿಸಲ್ಪಟ್ಟವನಿಗೆ ಕ್ರೂರವಾಗಿ ಕಪಾಳಮೋಕ್ಷ ಮಾಡುತ್ತಿದ್ದು ಗುದ್ದಿದ್ದಾನೆ. ಆತನ ಟೀ ಶರ್ಟ್ ಹಿಡಿದು ಬೆದರಿಕೆ ಹಾಕಿದ್ದಾನೆ. ಕಳ್ಳ ತಪ್ಪಿಸಿಕೊಂಡು ಹೋಗಲು ಯತ್ನಿಸಿದರೂ ಬಿಡದೇ, ಆತನ ವಿವರಣೆಯನ್ನೂ ಕೇಳದೆ ವಿದ್ಯಾರ್ಥಿ ಹೊಡೆಯುತ್ತಲೇ ಇದ್ದ. ಆದರೆ ಈ ವೇಳೆ ಕೆಲವರು ಸುಮ್ಮನೆ ನೋಡುತ್ತಾ ನಿಂತಿದ್ದರೆ, ಹಲವರು ವಿದ್ಯಾರ್ಥಿಯ ಕ್ರಮವನ್ನು ಬೆಂಬಲಿಸಿದ್ದಾರೆ. ಕೆಲವರು ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ವೈರಲ್ ವಿಡಿಯೋ ವೀಕ್ಷಿಸಿದ ಹಲವರು ಈ ವಿದ್ಯಾರ್ಥಿಯನ್ನು ಒಲಿಂಪಿಕ್ಸ್ ಬಾಕ್ಸಿಂಗ್‌ಗೆ ಕಳುಹಿಸಬೇಕೆಂದು ಹೇಳಿದ್ದರೆ ಇತರರು ವಿದ್ಯಾರ್ಥಿಯು ವ್ಯಕ್ತಿಯ ಮೇಲೆ ಮಾಡಿದ ಹಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದು ಗುಂಪು ಫೋನ್ ಕದಿಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಈ ರೀತಿ ಹೊಡೆಯುವ ಹಕ್ಕು ಯಾರಿಗೂ ಇಲ್ಲ, ಆತ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು ಎಂದಿದ್ದಾರೆ.