ಜಾಗತಿಕ ತಾಪಮಾನ ಏರಿಕೆಯ ಪರಿಣಾಮವು ಭಾರತದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ ಮತ್ತು ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ದಟ್ಟವಾದ ಮಂಜು ಕಾಣಿಸಿಕೊಂಡಿದೆ.
ನಗರದಲ್ಲಿ ವರ್ಷದ ಅತ್ಯಂತ ಬಿಸಿ ತಿಂಗಳು ಎಂದೇ ಎನ್ನಿಸಿಕೊಂಡಿರುವ ಮೇ ತಿಂಗಳಲ್ಲಿ ಕಂಡುಬಂದ ಅಸಾಮಾನ್ಯ ವಿದ್ಯಮಾನ ಇದು. ಇದು ಚಳಿಗಾಲವೇ ಎಂದು ನೆಟಿಜನ್‌ಗಳಿಗೆ ಅಚ್ಚರಿ ಮೂಡಿಸಿದೆ. ಮುಂಜಾನೆ ಸುತ್ತಾಡಿಕೊಂಡು ಬರುವವರು ಮತ್ತು ಪ್ರಯಾಣಿಕರು ಮಂಜನ್ನು ಸೆರೆಹಿಡಿಯುವ ಚಿತ್ರಗಳು ಮತ್ತು ವೀಡಿಯೊಗಳೊಂದಿಗೆ ಟ್ವಿಟ್ಟರ್ ಅನ್ನು ತುಂಬಿದ್ದಾರೆ.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ತಾಪಮಾನ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಜನರಲ್ಲಿ ಕುತೂಹಲ ಮೂಡಿದೆ. ಯಾವಾಗ ಏನು ಸಂಭವಿಸುತ್ತದೆ ಎಂದು ತಿಳಿಯುವುದೇ ಕಷ್ಟ ಎಂದು ಕಮೆಂಟ್ಗಳಲ್ಲಿ ಹೇಳಲಾಗುತ್ತಿದೆ.
https://twitter.com/Aparna/status/1653932127702876160?ref_src=twsrc%5Etfw%7Ctwcamp%5Etweetembed%7Ctwterm%5E1653932127702876160%7Ctwgr%5E0b79be81828c87e02eb60c75d3dbe11e8a8fac64%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fdelhi-shrouded-in-a-dense-fog-netizens-wonder-if-it-was-the-winter-season