
ಆರೋಪಿ ಪವನ್ ಮಲ್ಹೋತ್ರಾ ಖಾಸಗಿ ಸಂಸ್ಥೆಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಎನ್ನಲಾಗಿದೆ. ಈತನು ಶ್ವಾನದ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಇದನ್ನು ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಹಲವಾರು ಪ್ರಾಣಿ ಪ್ರಿಯರು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು ದೇಶದಲ್ಲಿ ಹೆಣ್ಣು ಪ್ರಾಣಿಗಳೂ ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ವಿಡಿಯೋದಲ್ಲಿ ಅರೆಬೆತ್ತಲೆಯಾಗಿದ್ದ ಪವನ್ ಮಲ್ಹೋತ್ರಾ ತನ್ನ ಕುಕೃತ್ಯವನ್ನು ನಡೆಸಿದ್ದಾರೆ. ಇದು ಪ್ರಾಣಿಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.
ಆರೋಪಿ ಪವನ್ ವಿರುದ್ಧ ಭಾರತೀಯ ದಂಡ ಸಂಹಿತೆ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಬಿ ಹೆಸರಿನ ಪೀಪಲ್ ಫಾರ್ ಎನಿಮಲ್ಸ್ ಸದಸ್ಯರೊಬ್ಬರು ರಜೌರಿ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 14ರಂದು ಎಫ್ಐಆರ್ ದಾಖಲಿಸಿದ್ದಾರೆ.
ಪವನ್ ಪದೇ ಪದೇ ಬೀದಿ ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಇವನ ಮೇಲೆ ಈಗಲೇ ಸೂಕ್ತ ಕ್ರಮ ಜರುಗಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈತ ಮಹಿಳೆಯರ ಮೇಲೂ ಭೀಕರ ದೌರ್ಜನ್ಯ ಎಸಗುತ್ತಾನೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ,
(Warning: Video contains content inappropriate for certain audiences. Viewer discretion is recommended)