
ನವದೆಹಲಿ: ಮನೆಯಲ್ಲಿ ಮಲಗಿದ್ದ ವೇಳೆ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಪಾಲಂ ಪ್ರದೇಶದಲ್ಲಿ ನಡೆದಿದೆ.
ಕೊಲೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲವಾದರೂ, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. 25 ವರ್ಷದ ಮಾದಕ ವ್ಯಸನಿಯಾಗಿರುವ ಆರೋಪಿಯನ್ನು ಕೇಶವ್ ಎಂದು ಗುರುತಿಸಲಾಗಿದೆ. ಆತ ಕೆಲವು ದಿನಗಳ ಹಿಂದೆ ಪುನರ್ವಸತಿ ಕೇಂದ್ರದಿಂದ ಮರಳಿದ್ದ. ತನ್ನ ಮಾದಕ ವ್ಯಸನಕ್ಕಾಗಿ ಗದರಿಸಿದ್ದರಿಂದ ಕೋಪಗೊಂಡ ಆತ ಕೋಪದ ಭರದಲ್ಲಿ ತನ್ನ ಹೆತ್ತವರು, ಸಹೋದರಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ದಿನೇಶ್ ಕುಮಾರ್(42), ಅವರ ಪತ್ನಿ ದರ್ಶನ್ ಸೈನಿ(40), ತಾಯಿ ದೀವಾನೋ ದೇವಿ(75) ಮತ್ತು ಮಗಳು ಊರ್ವಶಿ(22) ಎಂದು ಗುರುತಿಸಲಾಗಿದೆ.