
ರೆಸ್ಟೋರೆಂಟ್ ನಲ್ಲಿ ಸೀರೆಯು ಅನುಮತಿಸಲ್ಪಡುತ್ತದೆಯೇ ಎಂದು ಮಹಿಳೆಯೊಬ್ಬರು ಸಿಬ್ಬಂದಿಯನ್ನು ಕೇಳುವ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ದೆಹಲಿಯ ಅಕ್ವಿಲಾ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ನಿಮ್ಮ ಎದೆ ನಡುಗಿಸುತ್ತೆ ಚಲಿಸುತ್ತಿರುವ ರೈಲು ಏರಲೆತ್ನಿಸಿದ ಮಹಿಳೆ ವಿಡಿಯೋ
ವಿಡಿಯೋದಲ್ಲಿ “ಸೀರೆಗೆ ಅನುಮತಿ ಇಲ್ಲ ಎಂದು ನನಗೆ ತೋರಿಸಿ” ಎಂದು ಮಹಿಳೆಯೊಬ್ಬರು ಸಿಬ್ಬಂದಿಯನ್ನು ಕೇಳುತ್ತಿರುವುದನ್ನು ನೋಡಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ, “ಮೇಡಂ, ನಾವು ಸ್ಮಾರ್ಟ್ ಕ್ಯಾಶುಯಲ್‌ಗಳನ್ನು ಮಾತ್ರ ಅನುಮತಿಸುತ್ತೇವೆ ಮತ್ತು ಸೀರೆ ಸ್ಮಾರ್ಟ್ ಕ್ಯಾಶುಯಲ್‌ಗಳ ಅಡಿಯಲ್ಲಿ ಬರುವುದಿಲ್ಲ. ಅಷ್ಟೇ” ಎಂದು ಹೇಳಿದ್ದಾರೆ.
16 ಸೆಕೆಂಡುಗಳ ವಿಡಿಯೋವನ್ನು ಫೇಸ್‌ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕ್ಲಿಪ್ 2.25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ರೆಸ್ಟೋರೆಂಟ್ ವಿರುದ್ಧ ಆಕ್ರೋಶಗೊಂಡಿದ್ದಾರೆ.