
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಮರ್ ಜವಾನ್ ಜ್ಯೋತಿಗೆ ಗೌರವ ವಂದನೆ ಸಲ್ಲಿಸುವರು.
ಗಣ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸುವರು. ನವೀಕರಣಗೊಂಡ ರಾಜಪಥ ಕರ್ತವ್ಯಪಥ ಆಗಿ ಬದಲಾಗಿದ್ದು ಮೊದಲ ಬಾರಿಗೆ ಇಲ್ಲಿ ಪರೇಡ್ ನಡೆಯಲಿದೆ. ವಿಶ್ವಕ್ಕೆ ತನ್ನ ಸಾಂಸ್ಕೃತಿಕ, ಕಲಾ ಮತ್ತು ಸೇನಾ ವೈಭವ ತೋರಿಸಲು ಭಾರತ ಸಿದ್ಧವಾಗಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ ಸಿಸಿ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈಜಿಪ್ಟ್ ಸೇನೆಯ 120 ಯೋಧರು ಪರೇಡ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಕರ್ನಾಟಕ ಸೇರಿದಂತೆ 17 ರಾಜ್ಯಗಳು ಹಾಗೂ ಹಲವು ಸಚಿವಾಲಯಗಳ ಸ್ತಬ್ಧ ಚಿತ್ರಗಳ ಪ್ರದರ್ಶನ ಇರುತ್ತದೆ.
ಭಾರತೀಯ ಸೇನೆಯು ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ ತಯಾರಿಸಿದ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರದರ್ಶನ ಇದೆ ಮೊದಲ ಬಾರಿಗೆ ನಡೆಯಲಿದೆ.